ಕಿರಿಮಂಜೇಶ್ವರ : ತಾರಾಮಂಡಲ ಚಿತ್ರದುರ್ಗ ಆಯೋಜಿಸಿದ 18ನೇ ಇಂಟರ್ ನ್ಯಾಷನಲ್ ಲೆವೆಲ್ ಸೈನ್ಸ್ ಟ್ಯಾಲೆಂಟ್ ಎಕ್ಸಾಮ್ 2024 ಶುಭದಾ ಆಂಗ್ಲ ಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾಧನೆಯನ್ನು ಮಾಡಿರುತ್ತಾರೆ.
ರಾಷ್ಟ್ರ ಮಟ್ಟದಲ್ಲಿ ನವ್ಯ ಆಚಾರ್ಯ (7ನೇ ತರಗತಿ) 2ನೇ ರ್‍ಯಾಂಕ್ , ಶ್ರಮನ್ ಎನ್ ದೇವಾಡಿಗ (6ನೇ ತರಗತಿ) 3ನೇ ರ್‍ಯಾಂಕ್, ಕೃತಿ (8ನೇ ತರಗತಿ) 4ನೇ ರ್‍ಯಾಂಕ್ ಪಡೆದಿರುತ್ತಾರೆ.
ರಾಜ್ಯಮಟ್ಟದಲ್ಲಿ ರಿಯಾ ಆರ್ ಪೂಜಾರಿ (7ನೇ ತರಗತಿ) 2ನೇ ರ್‍ಯಾಂಕ್,ಆರಾಧ್ಯ ಬಿ (6ನೇ ತರಗತಿ ) 3ನೇ ರ್‍ಯಾಂಕ್ ,ಇಶಾನ್ವಿ ಎ ಎಂ (8ನೇ ತರಗತಿ) 4ನೇ ರ್‍ಯಾಂಕ್ ಪಡೆದಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ ನಂದಿನಿ (7ನೇ ತರಗತಿ) 2ನೇ ರ್‍ಯಾಂಕ್, ನಿಶ್ಚಿತ್ ಎನ್ ಕಿಣಿ (6ನೇ ತರಗತಿ) 3ನೇರ್‍ಯಾಂಕ್ , ರಶ್ಮಿತ (7ನೇ ತರಗತಿ) 3ನೇ ರ್‍ಯಾಂಕ್, ಮನ್ವಿತ್ ದೇವಾಡಿಗ (8ನೇ ತರಗತಿ) 5ನೇ ರ್‍ಯಾಂಕ್ ಪಡೆದಿರುತ್ತಾರೆ.
ತಾಲೂಕು ಮಟ್ಟದಲ್ಲಿ ಸೃಜನಾ (7ನೇ ತರಗತಿ) 2ನೇ ರ್‍ಯಾಂಕ್, ರಿಶಿತಾ 3ನೇ ರ್‍ಯಾಂಕ್ , ದೃತಿ (7ನೇತರಗತಿ ) 4ನೇ ರ್‍ಯಾಂಕ್ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.