Home » ಮೆಕ್ಕಾದಲ್ಲಿ ಪ್ರವಾಹ ಜನಜೀವನ ಅಸ್ತವ್ಯಸ್ತ
 

ಮೆಕ್ಕಾದಲ್ಲಿ ಪ್ರವಾಹ ಜನಜೀವನ ಅಸ್ತವ್ಯಸ್ತ

by Kundapur Xpress
Spread the love

ಮೆಕ್ಕಾ : ಮರಳುಗಾಡು ಎಂದೇ ಪ್ರಸಿದ್ಧವಾಗಿರುವ ಸೌದಿ ಅರೆಬಿಯಾ ಸುತ್ತಮುತ್ತ ಭಾರೀ ಮಳೆಯಾಗಿದ್ದು ಮೆಕ್ಕಾ, ಮದೀನ, ಜೆಡ್ಡಾ ನಗರಗಳು ಮುಳುಗಿವೆ.

ಈ ನಗರಗಳ ತುಂಬೆಲ್ಲಾ ನೀರು ಹರಿಯುತ್ತಿದ್ದು, ಬಸ್, ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.  ಸಿಡಿಲು ಗುಡುಗಿನೊಂದಿಗೆ ಕೂಡಿದ ಭಾರೀ ಮಳೆಯಾಗಿದ್ದು, ಹೀಗಾಗಿ ಪ್ರವಾಹ ಸ್ಥಿತಿ ತಲೆದೋರಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ನೀರಿನಲ್ಲಿ ಕಾರು ಮತ್ತು ಬಸ್‌ಗಳು ಮುಳುಗಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸೌದಿ ಅರೆಬಿಯಾದ ಹವಾಮಾನ ಇಲಾಖೆ ಮೆಕ್ಕಾ, ಮದೀನ ಸೇರಿದಂತೆ ಹಲವಾರು ನಗರಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

 

Related Articles

error: Content is protected !!