ಕೋಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಕೋಟ ವಲಯದ ಮೂಡುಗಿಳಿಯಾರು ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಮೂಡುಗಿಳಿಯಾರು ಶಾಲೆಯ ಮುಖ್ಯೋಪಾಧ್ಯಾಯರಾದ ಜೂಲಿಯಟ್ ಕ್ರಾಸ್ತಾ ಉದ್ಘಾಟಿಸಿ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳು ದುಶ್ಚಟ ಮುಕ್ತ ಜೀವನ ನಡೆಸಬೇಕು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೋಟ ಸುಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಮಾಧವ ಪೈ ರವರು ಜೀವನದಲ್ಲಿ ಇತರರಿಂದ ಉಪಕ್ರತರಾಗಿ ಸಾಧನೆ ಮಾಡಿದ್ದರೆ ಇತರರಿಗೆ ಉತ್ತಮ ಕೆಲಸ ಮೊಬೈಲ್ ಅತಿಯಾದ ಬಳಕೆ ಒಂದು ದೊಡ್ಡ ದುಶ್ಟಟ, ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಬಳಸಬಾರದು, ಆಧ್ಯಾತ್ಮಿಕ ದಾರಿಯಲ್ಲಿ ಹೋದಾಗ ದುಷ್ಟದಿಂದ ದೂರ ಉಳಿಯಬಹುದು ಹಾಗೂ ಚಿಕ್ಕವರಿದ್ದಾಗಲೇ ಒಳ್ಳೆ ವ್ಯಕ್ತಿಗಳಾಗುವ ಸಂಕಲ್ಪವನ್ನು ಹೊಂದಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಅಮೃತ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ವಸಂತಿ , ಪ್ರೌಢಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಸರೋಜಾ ಸ್ವಾಗತಿಸಿ ಶ್ರೀ ಲಕ್ಷಿ÷್ಮ ವಂದಿಸಿದರು. ವಲಯದ ಮೇಲ್ವಿಚಾರಕಿ ನೇತ್ರಾವತಿ ನಿರೂಪಿಸಿದರು