ಹೈದರಾಬಾದ್ : ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಲ್ಲಿ ಕುಂದಾಪುರದ ಲಾಸ್ಯ ಮಧ್ಯಸ್ಥ ಪ್ರತಿನಿಧಿಸುತ್ತಿದ್ದಾಳೆ
ಯೋಗವು ಭಾರತದ ಹುಟ್ಟಿದೆ, ಯೋಗವು ಅತ್ಯುತ್ತಮ ವ್ಯಾಯಾಮವಾಗಿದೆ ಪ್ರತಿದಿನ ಯೋಗ ಮಾಡುವುದರಿಂದ ತುಂಬಾ ಆರೋಗ್ಯಕರವಾಗಿದೆ ಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗವಾಗಿದೆ
ಯೋಗವು 5000 ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರ ಸಾಮಾನ್ಯವಾಗಿ ಯೋಗವೆಂದರೆ ತಿರುಗುವ ಬಾಗುವ ಚಾಚುವ ಮತ್ತು ಉಸಿರಾಟದ ವ್ಯಾಯಾಮವೆಂದು ಜನರು ತಿಳಿದಿದ್ದಾರೆ ಇವೆಲ್ಲ ಮೇಲ್ನೋಟಕ್ಕೆ ಕಂಡು ಬರುವ ಸಂಗತಿಗಳಾಗಿವೆ ನಿಜವಾಗಿ ಯೋಗವೆಂದರೆ ವ್ಯಕ್ತಿಯ ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಮ್ಮಿಸುವ ಒಂದು ವಿಜ್ಞಾನವಾಗಿದೆ
ಯೋಗವು ಯಾವುದೇ ಖರ್ಚಿಲ್ಲದೆ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಅದು ನಿಮ್ಮ ಸಂಪತ್ತಿಗೆ ಕಾರಣವಾಗುತ್ತದೆ ದೇಹದ ಹೊರಗೆ ನಡೆಯುವುದನ್ನು ನೀವು ಯಾವಾಗಲೂ ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ದೇಹದ ಒಳಗೆ ಏನು ನಡೆಯುತ್ತದೆ ಎಂಬುದನ್ನು ನೀವು ಯೋಗ ಬಲ್ಲವರಾದರೆ ಯಾವಾಗಲೂ ನಿಯಂತ್ರಿಸಬಹುದು
ಹೈದರಾಬಾದಿನಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ತಂಡವವು ಭಾಗವಹಿಸುತ್ತಿದ್ದು ಕರ್ನಾಟಕ ತಂಡದಲ್ಲಿ ಕುಂದಾಪುರದ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಯೋಗ ಕುಮಾರಿ ಬಿರುದಾಂಕಿತ ಕುಂದಾಪುರದ ಲಾಸ್ಯ ಮಧ್ಯಸ್ಥ ಕರ್ನಾಟಕ ತಂಡದಲ್ಲಿ ಆಯ್ಕೆಯಾಗಿ ಪ್ರತಿನಿಧಿಸುತ್ತರುವುದು ನಮ್ಮ ಕುಂದಾಪುರದ ಹೆಮ್ಮೆ