ಭುವನೇಶ್ವರ : ‘ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ದನಲ್ಲಿದೆ. ದೇಶದ ಪರಂಪರೆಯಿಂದಾಗಿ ಜಗತ್ತು ಇಂದು ಭಾರತದ ಮಾತನ್ನು ಕೇಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರವಾಸಿ ಭಾರತೀಯ ದಿವಸದ ಪ್ರಯುಕ್ತ ಮಾತನಾಡಿದ ಪ್ರಧಾನಿ ಭಾರತ ಕೇವಲ ಪ್ರಜಾಪ್ರಭುತ್ವದ ತಾಯಿಯಷ್ಟೇ ಪ್ರಜಾಪ್ರಭುತ್ವವು ಈ ದೇಶದ ಭಾಗವಾಗಿದೆ. ಇಂದು ಜಗತ್ತು ಭಾರತದ ಮಾತನ್ನು ಕೇಳುತ್ತಿದೆ. ಅದು ತನ್ನದೇ ಆದ ಅಭಿಪ್ರಾಯಗಳನ್ನು ಮಾತ್ರವಲ್ಲದೇ ಜಾಗತಿಕ ದಕ್ಷಿಣದ ಅಭಿಪ್ರಾಯಗಳನ್ನು ಕೂಡ ಬಲಪಡಿಸುತ್ತದೆ. ಭಾರತವು ತನ್ನ ಪರಂಪರೆಯ ಬಲದಿಂದಾಗಿ, ಭವಿಷ್ಯವು ಯುದ್ಧದಲ್ಲಿ ಅಲ್ಲ ಬುದ್ಧನಲ್ಲಿದೆ ಎಂದು ಹೇಳಲು ಸಾಧ್ಯ ಎಂದು ಹೇಳಿದರು. ಇದೇ ವೇಳೆ ಅನಿವಾಸಿ ಭಾರತೀಯರು ಎಲ್ಲೇ ಇದ್ದರೂ ಸಹಾಯ ಮಾಡುವುದು ನಮ್ಮ ಕರ್ತವ್ಯ’ ಎಂದರು.