Home » ATP ಸೇವೆಯನ್ನು ಮರು ಸ್ಥಾಪಿಸಲು ಶಾಸಕ ಗಂಟಿಹೊಳೆ ಆಗ್ರಹ
 

ATP ಸೇವೆಯನ್ನು ಮರು ಸ್ಥಾಪಿಸಲು ಶಾಸಕ ಗಂಟಿಹೊಳೆ ಆಗ್ರಹ

by Kundapur Xpress
Spread the love

ಬೈಂದೂರು : ಕಳೆದ 15 ವರ್ಷಗಳಿಂದ ಮೆಸ್ಕಾಂ ಉಪವಿಭಾಗ ಕಚೇರಿಗಳಲ್ಲಿ ಕಾರ್ಯಾಚರಿಸುತ್ತಿದ್ದ ATP (Any Time Payment) ಯಂತ್ರಗಳನ್ನು ಮರು ಸ್ಥಾಪಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.

ಕಳೆದ 15 ವರ್ಷಗಳಿಂದ ಮೆಸ್ಕಾಂ ಉಪ ವಿಭಾಗ ಕಚೇರಿ ಗಳಲ್ಲಿ ಗ್ರಾಹಕರವಿದ್ಯುತ್ ಬಿಲ್ ಪಾವತಿ ಸಲುವಾಗಿ ATP( Any Time Payment ) ಯಂತ್ರಗಳ ಮೂಲಕ ಆಪರೇಟರ್ ಗಳು ಗ್ರಾಹಕರಿಗೆ ಅನುಕೂಲವಾಗುವ ಸಮಯದಲ್ಲಿ ವಿದ್ಯುತ್ ಬಿಲ್ ಪಡೆದು ಕೊಂಡು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದರು. ಮೆಸ್ಕಾಂ ನ ಬಿಲ್ ಪಾವತಿ ಕೌಂಟರ್ ಇದ್ದರೂ ATP ಮೂಲಕ ಸರಕಾರಿ ಕಚೇರಿ ಅವಧಿ ಮೀರಿಯೂ ಹಾಗೂ ರಜಾ ದಿನಗಳಲ್ಲಿ ಯಾವುದೇ ವ್ಯತ್ಯಯ ಇಲ್ಲದೇ ಬಿಲ್ ಪಾವತಿ ಆಗುತಿತ್ತು. ಆದರೆ ಪ್ರಸ್ತುತ ಡಿಸೆಂಬರ್ ಅಂತ್ಯಕ್ಕೆ ಸದರಿ ಸೇವೆಗಳ ಗುತ್ತಿಗೆ ಅವಧಿ ಮುಕ್ತಾಯ ಗೊಂಡ ಕಾರಣ ನೀಡಿ ಗುತ್ತಿಗೆಯನ್ನು ನವೀಕರಣ ಮಾಡದೇ ಮೆಸ್ಕಾಂ ಜನವರಿ ಒಂದರಿಂದ ATP ಯಂತ್ರ ಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಆನ್ ಲೈನ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ನೆಟ್ ವರ್ಕ್ ಸಮಸ್ಯೆ ಇರುವ ದೂರದ ಊರಿಂದ ಮೆಸ್ಕಾಂ ಕಚೇರಿಗೆ ಬರುವ ಗ್ರಾಹಕರಿಗೆ ಅನಾನುಕೂಲವಾಗಲಿದೆ. ವಿಶೇಷವಾಗಿ ವಯೋ ವೃದ್ಧರಿಗೆ, ಅಶಕ್ತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಕಳೆದ 15 ವರ್ಷ ಗಳಿಂದ ATP ಆಪರೇಟರ್ ಆಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದ ನಿರ್ವಾಹಕರು ಉದ್ಯೋಗ ಕಳೆದು ಕೊಂಡು ಜೀವನ ಭದ್ರತೆಯನ್ನು ಕಳೆದು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವ ಪರಿಸ್ಥಿತಿ ಹಾಗೂ ಮೆಸ್ಕಾಂ ಗೆ ನಿಯಮಿತವಾಗಿ ಪಾವತಿ ಆಗುತ್ತಿದ್ದ ಬಿಲ್ ಪಾವತಿಯೂ ವಿಳಂಬವಾಗಲಿದೆ.

ಹಾಗಾಗಿ ATP ಸೇವೆಯನ್ನು ಮುಕ್ತಾಯ ಗೊಳಿಸುವ ಆದೇಶ ನೀಡಿರುವ ಮೆಸ್ಕಾಂ ತನ್ನ ಆದೇಶವನ್ನು ಮರು ಪರಿಶೀಲಿಸಿ ಮೆಸ್ಕಾಂ ATP ಸೇವೆಯನ್ನು ಪುನರಾರಂಭಿಸಲು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬೈಂದೂರು ಶಾಸಕರು ಪತ್ರ ಮುಖೇನ ಆಗ್ರಹಿಸಿದ್ದಾರೆ.

 

Related Articles

error: Content is protected !!