Home » ಶಿಲಾಮಯ ದ್ವಾರಮಂಟಪ ಮತ್ತು ಗರ್ಭಗುಡಿಯ ರಜತ ಕವಚ ನಾಳೆ ಉದ್ಘಾಟನೆ
 

ಶಿಲಾಮಯ ದ್ವಾರಮಂಟಪ ಮತ್ತು ಗರ್ಭಗುಡಿಯ ರಜತ ಕವಚ ನಾಳೆ ಉದ್ಘಾಟನೆ

ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಾಳೆ ಜನವರಿ 15ರಂದು ನವೀಕೃತ ಶಿಲಾಮಯ ದ್ವಾರಮಂಟಪ ಮತ್ತು ಶ್ರೀ ದೇವರ ಗರ್ಭಗುಡಿಯ ರಜತ ಕವಚದ ಉದ್ಘಾಟನಾ ಸಮಾರಂಭ ಜರುಗಲಿದೆ.

ಸೋಮವಾರ ಧಾರ್ಮಿಕ ವಿಧಿ ವಿದಾನಗಳು ಆರಂಭಗೊಂಡಿದ್ದು, ಇಂದು ರಂದು ಮಕರ ಸಂಕ್ರಾಂತಿ ಪ್ರಯುಕ್ತ ಕಲಶ ಪೂಜೆ, ಸಂಜೆ 6.30ಕ್ಕೆ ಸತ್ಯನಾರಾಯಣ ಪೂಜೆ ಜರುಗಲಿದೆ. ನಾಳೆ ಜ.15ರಂದು ಸಂಜೆ 4.00 ಗಂಟೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿಮಹಾಸ್ವಾಮೀಜಿ ಶಿಲಾಮಯ ದ್ವಾರ ಮಂಟಪ ಮತ್ತು ಗರ್ಭಗುಡಿಯ ರಜತ ಕವಚವನ್ನು ಉದ್ಘಾಟಿಸಲಿದ್ದಾರೆ.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇದ ಮೂರ್ತಿ ಲೋಕೇಶ ಅಡಿಗ, ಕುಂದಾಪುರ ವಿಶ್ವರಾಮಕ್ಷತ್ರೀಯ ಸಂಘದ ಅಧ್ಯಕ್ಷ ಎಚ್.ಶಶಿಧರ್ ನಾಯ್ಕ, ಸಮಾಜದ ಹಿರಿಯರಾದ ದತ್ತಾನಂದ, ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಲಕ್ಷ್ಮೀಶ ಹವಲ್ದಾರ ಮೊದಲಾದವರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ರಾಮಕತ್ರಿಯರ ಸಂಘದ ಕಾರ್ಯದರ್ಶಿ ನಾಗರಾಜ್‌ ನಾಯ್ಕ್‌ ತಿಳಿಸಿದ್ದಾರೆ

 

Related Articles

error: Content is protected !!