ಮಹಾಕುಂಭ ನಗರ : ಮಕರ ಸಂಕ್ರಾಂತಿಯ ಪವಿತ್ರ ದಿನವಾದ ಮಂಗಳವಾರ ತ್ರಿವೇಣಿ ಸಂಗಮದಲ್ಲಿ ವಿವಿಧ ಅಖಾಡಗಳ ಸಾವಿರಾರು ಸಾಧು ಸಂತರು ಅಮೃತ ಸ್ನಾನ ಕೈಗೊಂಡಿದ್ದು ಮೂರೂವರೆ ಕೋಟಿ ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಸೋಮವಾರ ಆರಂಭಗೊಂಡ ಕುಂಭಮೇಳ ಹೊಸ ದಾಖಲೆ ಬರೆದಿದೆ
ಬಹುತೇಕ ಅಖಾಡಾಗಳ ಭಸ್ಮಧಾರಿ ನಾಗಾ ಸಾಧುಗಳು ಮತ್ತು ನಗ್ನರಾದ ಸನ್ಯಾಸಿಗಳು ಶಿಸ್ತಿನಿಂದ ತಮ್ಮ ಪಾರಂಪರಿಕ ಶಸ್ತ್ರಾಸ್ತ್ರಗಳೊಂದಿಗೆ ಸ್ಥಾನಗೈದು ಭಕ್ತರನ್ನು ಅನುಗ್ರಹಿಸುವ ಮೂಲಕ ನೋಡುಗರನ್ನು ಮಂತ್ರ ಮುಗ್ಧಗೊಳಿಸಿದರು. ಈ ನಾಗಾ ಸಾಧುಗಳು ಆಧ್ಯಾತ್ಮಿಕವಾಗಿ ಅಪಾರ ಸಾಧನೆಗೈದವರಾಗಿರುವುದು ವಿಶೇಷ ವಾಗಿದೆ
ಕೌಶಲಯುಕ್ತವಾಗಿ ಈಟಿಗಳು ಮತ್ತು ಖಡ್ಗಗಳನ್ನು ಹಿಡಿದು ಡಮರುಗವನ್ನು ಅತ್ಯಂತ ಉತ್ಸಾಹದಿಂದ ಭಾರಿಸುತ್ತಾ ಭಗವಂತನನ್ನು ಸ್ಮರಿಸಿ, ಜಯಘೋಷಗಳೊಂದಿಗೆ ಸಂತಸ್ತೋಮ ಸಾಗಿಬರುತ್ತಿದ್ದ ರೀತಿಯೇ ಭಕ್ತರನ್ನು ಭಕ್ತಿ ಪರವಶರನ್ನಾಗಿಸಿತು