ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಯ ತನಕ ಇಸ್ರೋದ ಮುಖ್ಯಸ್ಥರಾಗಿದ್ದ ವಿ. ಸೋಮನಾಥನ್ ಮಂಗಳವಾರ ನಿವೃತ್ತಿಯಾಗಿದ್ದಾರೆ.
1984ರಲ್ಲಿ ಇಸ್ರೋ ಸೇರ್ಪಡೆಯಾಗಿದ್ದ ನಾರಾಯಣನ್ ನಂತರದ ವರ್ಷಗಳಲ್ಲಿ ಇಸ್ರೋದ ಪ್ರಮುಖ ಯೋಜನೆಗಳಾದ ರಾಕೆಟ್ ಅಭಿವೃದ್ಧಿ, ಕ್ರಯೋಜನಿಕ್ ಎಂಜಿನ್‌ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಗನಯಾನ, ಶುಕ್ರನ ಅಧ್ಯಯನ, ಚಂದ್ರಯಾನ-4, ಭಾರತೀಯ ಅಂತರಿಕ್ಷ ನಿಲ್ದಾಣದಂತಹ ಇಸ್ರೋದ ಯೋಜನೆಗಳು ನಾರಾಯಣನ್ ಅವರ ಮುಂದಿನ ಪ್ರಮುಖ ಗುರಿಗಳಾಗಿರಲಿದೆ ಎಂದು ತಿಳಿದು ಬಂದಿದೆ