ಕುಂದಾಪುರ : ನಗರದ ಖಾರ್ವಿಕೇರಿ ಬಳಿಯ ರಿಂಗ್ ರೋಡ್ ನ ವಿಸ್ತರಣಾ ಕಾಮಗಾರಿಯಲ್ಲಿ ಕಲ್ಲುಗಳನ್ನು ಸುರಿಯುತ್ತಿದ್ದ ವೇಳೆ ಚಾಲಕನ ಹತೋಟಿ ತಪ್ಪಿದ ಟಿಪ್ಪರೊಂದು ನದಿಗೆ ಉರುಳಿ ಬಿದ್ದ ಘಟನೆ ನಡೆದಿದೆ
ಕುಂದಾಪುರ ಖಾರ್ವಿಕೇರಿಯ ಪಂಚಗಂಗಾವಳಿ ನದಿಗೆ ಲಾರಿ ಉರುಳಿ ಬಿದ್ದಿದ್ದು ಅದ್ರಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ನಂತರ ಜೆಸಿಬಿ ಬಳಸಿ ಸತತ ಪ್ರಯತ್ನದ ಮೂಲಕ ಟಿಪ್ಪರನ್ನು ಮೇಲಕ್ಕೆ ಎತ್ತಲಾಗಿದೆ.