ಕೋಟ : ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಜಾತ್ರೋತ್ಸವದ ಅಂಗವಾಗಿ ಗುರುನರಸಿಂಹ ಬಯಲು ರಂಗವೇದಿಕೆಯಲ್ಲಿ ಯುವ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ 8ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಜ.19ರಂದು ಸಂಜೆ 6.30ಕ್ಕೆ ನಡೆಯಲಿದ್ದು ಈ ಪ್ರಯುಕ್ರ ಸಭಾ ಕಾರ್ಯಕ್ರಮದಲ್ಲಿ ಸಾಧಕರಾದ ಜಯದೇವ ಹೃದ್ರೋಗ ಆಸ್ಪತ್ರೆ ಬೆಂಗಳೂರು ಖ್ಯಾತ ಹೃದ್ರೋಗ ತಜ್ಞೆ ಡಾ. ಪ್ರಭಾವತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕೆ. ತಾರನಾಥ ಹೊಳ್ಳ, ಪ್ರಗತಿಪರ ಕೃಷಿಕ ಶ್ರೀಪತಿ ಅಧಿಕಾರಿ
ಕರ್ನಾಟಕ ಸರ್ಕಾರದ ಶೌರ್ಯ ಪ್ರಶಸ್ತಿ ಪುರಸ್ಕ್ರತ ಮಾ.ಧೀರಜ್ ಐತಾಳ್ ಇವರುಗಳನ್ನು ಗುರುತಿಸಿ ಗೌರವಿಸಲಿದೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ಕರಾವಳಿಯ ಸುಪ್ರಸಿದ್ಧ ಅಂತರಾಷ್ಟ್ರೀಯ ಮಟ್ಟದ ಗಾಯಕ-ಗಾಯಕಿಯರ ಹಾಗೂ ಝೀ ಕನ್ನಡ ಟಿವಿ ವಾಹಿನಿಯಲ್ಲಿ ಭಾಗವಹಿಸಿದ-ಹಲವಾರು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ತಂಡ ಸ್ಟೆಪ್ & ಸ್ಟೈಲ್ ಡ್ಯಾನ್ಸ್ ಸ್ಟುಡಿಯೋ ಸಾಸ್ತಾನ ಇವರ ಕೂಡುವಿಕೆಯಲ್ಲಿ ಸಂಗೀತ ಸಂಜೆ ನೃತ್ಯೋಲ್ಲಾಸ-2025 ಹಾಡು ಹೆಜ್ಜೆಗಳ ಭಾವ ದಿಬ್ಬಣ ಕಾರ್ಯಕ್ರಮಗಳು ಜರಗಲಿದೆ. ಎಂದು ಸಂಘಟಕರು ತಿಳಿಸಿದ್ದಾರೆ.