ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿಗೆ ಅಚ್ಚರಿಯ ಮೇಲೆ ಅಚ್ಚರಿ ನೀಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಮತ್ತೊಂದು ಐಸಿಹಾಸಿಕ ಸಾಧನೆ ಮಾಡಿದೆ. ಕಳೆದ ಡಿ.30ರಂದು ಹಾರಿಬಿಡಲಾ ಗಿದ್ದ ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್ 2 ನೌಕೆಗಳನ್ನು ಯಶಸ್ವಿಯಾಗಿ ಡಾಕಿಂಗ್ (ಪರಸ್ಪರ ಜೋಡಣೆ) ಮಾಡಲಾಗಿದೆ ಎಂದು ಇಸ್ರೋ ಶುಭ ಸುದ್ದಿ ನೀಡಿದೆ. ತನ್ಮೂಲಕ ಎರಡು ಬಾರಿ ಮುಂದೂಡಿ ಕೆಯಾಗಿದ್ದ ಪ್ರಯೋಗ ಯಶಸ್ವಿಯಾಗಿದೆ.
ಇದರೊಂದಿಗೆ ಇಂಥ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರವೇ ಈ ತಂತ್ರಜ್ಞಾನವನ್ನು ಸಿದ್ದಿಸಿಕೊಂಡಿದ್ದವು.
ಈ ಕುರಿತು ಗುರುವಾರ ಬೆಳಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಇಸ್ರೋ ಬಾಹ್ಯಾಕಾಶದ ಇತಿಹಾಸದಲ್ಲಿ ಭಾರತ ತನ್ನ ಹೆಸರನ್ನು ಜೋಡಣೆ ಮಾಡಿದೆ ಗುಡ್ ಮಾರ್ನಿಂಗ್ ಇಂಡಿಯಾ, ಇಸ್ರೋದ ಸ್ಪೇಡೆಕ್ಸ್ ಯೋಜನೆಯು ಐತಿಹಾಸಿಕ ಡಾಕಿಂಗ್‌ನಲ್ಲಿ ಯಶಸ್ಸು ಸಾಧಿಸಿದೆ ಎಂದು ತಿಳಿಸಿದೆ