ಕುಂದಾಪುರ : ಬ್ಯಾಂಕ್ ಗೆಂದು ಕಂಡ್ಲರಿಗೆ ತೆರಳಿದ್ದ ಬಳ್ಳೂರು ಗ್ರಾಮದ ಶ್ರುತಿ (39) ಅವರ ಮೃತ ದೇಹ ಹೊಳೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ
ಶೃತಿ ಅವರು ತನ್ನ ಪತಿಯ ಜತೆ ಜಾಗದ ನೋಂದಣಿಗೆಂದು ಕುಂದಾಪುರಕ್ಕೆ ಆಗಮಿಸಿದ್ದು ಬಳಿಕ ಬ್ಯಾಂಕ್‌ಗೆ ಹೋಗುತ್ತೇನೆಂದು ಸ್ಕೂಟಿಯಲ್ಲಿ ಕಂಡ್ಲೂರಿಗೆ ತೆರಳಿದ್ದರು. ಸುಮಾರು ಸಮಯ ಕಳೆದರೂ ಮರಳಿ ಮನೆಗೆ ಬಂದಿರಲಿಲ್ಲ ಅದೇ ಸಂದರ್ಭ ಯಾರೋ ಒಬ್ಬರು ಶ್ರುತಿ ಅವರ ಪತಿ ವಿನಯ್ ಭಂಡಾರಿಯವರಿಗೆ ಫೋನ್ ಕರೆ ಮಾಡಿ ಗರಡಿ ಮನೆ ಬಳಿ ವಾರಾಹಿ ನದಿಯ ಸಮೀಪ ಶ್ರುತಿ ಅವರ ಸ್ಕೂಟಿ ನಿಂತಿರುವುದಾಗಿ ತಿಳಿಸಿದ್ದರು.
ಸ್ಥಳಕ್ಕೆ ತೆರಳಿ ನೋಡಿದಾಗ ಶ್ರುತಿ ಅವರ ದೇಹ ನೀರಿನಲ್ಲಿ ತೇಲುತ್ತಿತ್ತು. ತತ್‌ಕ್ಷಣ ಜನರ ಸಹಾಯದಿಂದ ಮೇಲಕ್ಕೆತ್ತಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಕುಂದಾಪುರ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ