ಢಾಕಾ : ಬಾಂಗ್ಲಾದ ಪ್ರಧಾನಿ ಹುದ್ದೆ ತ್ಯಜಿಸಿದ ಬೆನ್ನಲ್ಲೇ ತನ್ನನ್ನು ಹಾಗೂ ತನ್ನ ಕಿರಿಯ ಸಹೋದರಿ ರೆಹನಾ ಹತ್ಯೆ ಸಂಚು ನಡೆದಿತ್ತು. ಕೇವಲ 20-25ನಿಮಿಷಗಳ ಅಂತರದಲ್ಲಿ ತಾನು ಹಾಗೂ ಸೋದರಿ ಈ ಕೊಲೆ ಯತ್ನದ ಸಂಚಿನಿಂದ ಪಾರಾದೆವು. ಅಲ್ಲಾನೇ ನಮ್ಮನ್ನು ಮೃತ್ಯುವಿನಿಂದ ಪಾರು ಮಾಡಿದ ಎಂದು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಬೆಚ್ಚಿ ಬೀಳಿಸುವ ಸತ್ಯ ಬಯಲುಗೊಳಿಸಿದ್ದಾರೆ.
ಪ್ರಧಾನಿ ಗಾದಿಯಿಂದ ಪದಚ್ಯುತಿ ಬೆನ್ನಲ್ಲೇ ತನ್ನ ಹತ್ಯೆಗೆ ಸಂಚು ನಡೆದಿತ್ತು. ಹಾಗೆಂದು ತನ್ನ ಹತ್ಯೆಗೆ ಪಿತೂರಿ ನಡೆದದ್ದು ಇದು ಮೊದಲಲ್ಲ, ಈ ಹಿಂದೆ ಹಲವು ಬಾರಿ ತನ್ನನ್ನು ಕೊಲ್ಲಲು ಯತ್ನ ನಡೆದಿತ್ತು. ಕೋಟಲಿಪಾರದಲ್ಲಿ ಭಾರೀ ಬಾಂಬ್ ಸ್ಫೋಟ = ಮುಖೇನ ತನ್ನನ್ನು ಮುಗಿಸಲು ಯತ್ನ ನಡೆದಿತ್ತು. 2024ರ ಆ. 5ರಂದೂ ತನ್ನ ಹತ್ಯೆಗೆ ಸಂಚು ನಡೆದಿತ್ತು. ಆದರೆ ಅಲ್ಲಾನ ಇಚ್ಛೆ ಬೇರೆಯೇ ಇತ್ತು. ಹಾಗಾಗೇ ತಾನಿನ್ನೂ ಬದುಕುಳಿದಿದ್ದೇನೆ ಎಂದು ಶೇಖ್ = ಹಸೀನಾ ತೀವ್ರ ಗದ್ಗದಿತರಾಗಿ, ತಮ್ಮ ನೇತೃತ್ವದ ಬಾಂಗ್ಲಾದೇಶ್ ಅವಾಮಿ ಲೀಗ್ ಪಾರ್ಟಿಯ ಫೇಸ್ ಬುಕ್ ಪೇಜ್ಗೆ ಶುಕ್ರವಾರ ಪೋಸ್ಟ್ ಮಾಡಿರುವ ಅಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ