ಹೊಸದಿಲ್ಲಿ : ಸುಮಾರು 65 ಲಕ್ಷ ಸ್ವಾಮಿತ್ತ ಆಸ್ತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿತರಿಸಿದರು. ದಾರಿದ್ರ್ಯ ನಿವಾರಣೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಆಸ್ತಿ ಪತ್ರ ಪ್ರಯೋಜನಕಾರಿ ಎಂದು ಪತ್ರಗಳ ಮಹತ್ತವನ್ನು ಪ್ರಧಾನಿ ಮೋದಿ ವಿವರಿಸಿದರು.
ವಿಡಿಯೋ ಕಾನ್ಸರೆನ್ಸಿಂಗ್ ಮುಖೇನ ಹಲವು ಫಲಾನುಭವಿಗಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಜನರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಮತ್ತು ಸಾಲ ಸೌಲಭ್ಯ ಹೊಂದಲು ಈ ಸ್ಟೀಮ್ ನೆರವಾಗುತ್ತೆ ಎಂದರು.
ಆಸ್ತಿ ಹಕ್ಕುಗಳು ಜಗತ್ತಿನಾದ್ಯಂತ ಪ್ರಮುಖ ಸವಾಲಾಗಿದೆ. ಹಲವು ದೇಶಗಳಲ್ಲಿ ಎಷ್ಟೋ ಜನರು ತಮ್ಮ ಆಸ್ತಿ-ಪಾಸ್ತಿಗಳಿಗೆ ಸಂಬಂಧಿಸಿ ಕಾನೂನು ಬದ್ಧ ದಾಖಲೆಗಳನ್ನೇ ಹೊಂದಿಲ್ಲವೆಂಬ ವಾಸ್ತವವು ವರ್ಷಗಳ ಹಿಂದೆ ವಿಶ್ವಸಂಸ್ಥೆ ನಡೆಸಿದ ಅಧ್ಯಯನದಿಂದ ವ್ಯಕ್ತವಾಗಿದೆ. ಬಡತನ ನಿವಾರಣೆಗೆ ಆಸ್ತಿಗಳ ಹಕ್ಕು ತೀರಾ ಮುಖ್ಯವೆಂದಿತ್ತು
ಗ್ರಾಮಗಳಲ್ಲಿನ ಅಸ್ತಿ-ಪಾಸ್ತಿಗಳು ನಿರ್ಜೀವ ಬಂಡವಾಳದಂತೆ. ಯಾಕೆಂದರೆ ಗ್ರಾಮೀಣ ಪ್ರದೇಶದಲ್ಲಿನ ಆಸ್ತಿ-ಪಾಸ್ತಿಗಳಿಂದ ಜನರಿಗೆ ಪ್ರಯೋಜನವಿಲ್ಲ, ಅವು ಅವರ ಆದಾಯ ಹೆಚ್ಚಳಕ್ಕೂ ನೆರವಾಗುವುದಿಲ್ಲ. ಹಾಗಾಗಿ ಇವು ನಿರ್ಜೀವ ಬಂಡವಾಳಕ್ಕೆ ಸಮಾನ ಎಂದು ಖ್ಯಾತ ಆರ್ಥಿಕ ತಜ್ಞರೋರ್ವರು ಅಭಿಪ್ರಾಯಿಸಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿದರು.
ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ‘ಲಾಲನ್’, ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಎಸ್.ಪಿ. ಸಿಂಗ್ ಬಫೇಲ್ ಪಂಚಾಯತ್ ರಾಜ್ ಖಾತೆ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು