ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ ಗೃಹಿಣಿಯೊಬ್ಬರು ಮಾಡಿದ ಸಾಲ ಮರುಪಾವತಿ ಮಾಡದ್ದಕ್ಕೆ ಆಕೆಯ ಅಪ್ರಾಪ್ತ ಪುತ್ರಿಯನ್ನೇ ಹೊತ್ತೊಯ್ದ ಭೂಪನೊಬ್ಬ ಮದುವೆಯಾದ ಘಟನೆ ಇಲ್ಲಿನ ಅನಗೋಳದಲ್ಲಿ ನಡೆದಿದೆ.
ವಿಶಾಲ್ ಢವಳಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪಿಯಾಗಿದ್ದು, ವಿಶಾಲ್ ಸೇರಿದಂತೆ ಆತನ ತಾಯಿ ರೇಖಾ ಢವಳಿ, ತಂದೆ ಪುಂಡಲಿಕ ಢವಳಿ ಮತ್ತು ಸಹೋದರ ಶ್ಯಾಮ ವಿರುದ್ದ ಬಾಲಕಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ