ಹೊಸದಿಲ್ಲಿ : ಜಾಗತಿಕವಾಗಿ ಪ್ರಸಿದ್ಧ ಮಹಾಕುಂಭ ಮೇಳವು ಪ್ರತಿಯೋರ್ವ ಭಾರತೀಯನ ಪಾಲಿಗೆ ಹೆಮ್ಮೆಯ ವಿಚಾರ. ದೇಶದ ಯುವಶಕ್ತಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಕುಂಭ ಮೇಳದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ. ಅಂತೆಯೇ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯು ಭಾರತದ ಸಾಂಸ್ಕೃತಿಕ ಅಸ್ಥಿತೆಯ ಮರುಸ್ಥಾಪನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಮನ್ಕಿ ಬಾತ್ ನಲ್ಲಿ ವಿಶ್ಲೇಷಿಸಿದ್ದಾರೆ.
ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯ ದ್ವಾದಶಿಯು ಭಾರತದ’ ಸಾಂಸ್ಕೃತಿಕ ಅಸ್ಥಿತೆಯ ಮರು ಅನುಷ್ಟಾನವಾಗಿದೆ. ಹಾಗಾಗಿ ಪೌಷ ಶುಕ್ಲ ದ್ವಾದಶಿಯು ಒಂದು ವಿಧದಲ್ಲಿ ಪ್ರತಿಷ್ಠಾ ದ್ವಾದಶಿ ದಿನವೂ ಆಗಿದೆ ಎಂದಿದ್ದಾರೆ ಪ್ರಧಾನಿ ಮೋದಿ