ಕುಂದಾಪುರ : ಬಿ.ಬಿ.ಹೆಗ್ಡೆ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಯಕ್ಷಿ ಟೆಕ್ ಸೊಲ್ಯೂಶನಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಜೊತೆಗಿನ ಸಹಯೋಗದಲ್ಲಿ 2025ರ ಜನವರಿ 17ರಂದು ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಇಂಟರ್ನ್ ಶಿಪ್ ಡ್ರೈವ್ ಆಯೋಜಿಸಿತು. ಕರ‍್ಯಕ್ರಮವನ್ನು ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ಅವರು ವಿದ್ಯರ‍್ಥಿಗಳಿಗೆ ಸ್ವಾಗತ ನೀಡಿ, ಇಂರ‍್ನ್‍ಶಿಪ್ ಮೂಲಕ ತರಬೇತಿ ಪಡೆಯುವ ಮಹತ್ವವನ್ನು ವಿವರಿಸುವ ಮೂಲಕ ಪ್ರಾರಂಭಿಸಿದರು. ಯಕ್ಷಿ ಟೆಕ್ ಸೊಲ್ಯೂಶನಸ್ ಸಂಸ್ಥೆಯ ಪ್ರತಿನಿಧಿ ಶ್ರೀ ಪವನ್ ಅವರು ಸಂಸ್ಥೆಯ ಹಿನ್ನೆಲೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ಅಂತಿಮ ಬಿ.ಎಸ್ಸಿ ಮತ್ತು ಬಿಸಿಎ ವಿದ್ಯರ‍್ಥಿಗಳು ಡ್ರೈವ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ಮತ್ತು ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅವರು ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯರ‍್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಕಾರ‍್ಯಕ್ರಮವು ವಿದ್ಯಾಸಂಸ್ಥೆ ಮತ್ತು ಕೈಗಾರಿಕೆ ನಡುವೆ ಸಹಕಾರವನ್ನು ಪ್ರೋತ್ಸಾಹಿಸಿ, ವಿದ್ಯರ‍್ಥಿಗಳಿಗೆ ಪ್ರಾಯೋಗಿಕ ಅನುಭವ ಪಡೆಯಲು ಮೌಲ್ಯಯುತ ಅವಕಾಶವನ್ನು ಒದಗಿಸುವ ಮಹತ್ವದ ಹೆಜ್ಜೆಯಾಯಿತು.