ಪಟ್ಟಣಂತಿಟ್ಟ : ಹಿಂದುಗಳ ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಈ ಬಾರಿಯ ಮಕರವಿಳಕ್ಕು ಋತುವಿನಲ್ಲಿ ಭಕ್ತರಿಂದ ಸಂಗ್ರಹವಾದ ಕಾಣಿಕೆ ಮೊತ್ತ ಹೊಸ ದಾಖಲೆ ಬರೆದಿದೆ
ಈ ಬಾರಿ ಒಟ್ಟು 440 ಕೋಟಿ ರೂ.ಕಾಣಿಕೆ ಸಂಗ್ರಹವಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 80 ಕೋ.ರೂ.ಗಳ ಹೆಚ್ಚಳ ದಾಖಲಿಸಿದೆ ಎಂದು ಕೇರಳ ಸಹಕಾರ, ಬಂದರು ಮತ್ತು ದೇವಸ್ವಂ ಸಚಿವ ವಿ.ಎನ್.ವಾಸವನ್ ಮಂಗಳವಾರ ಹೇಳಿದ್ದಾರೆ.
ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗಿದ್ದು, 6 ಲಕ್ಷ ಭಕ್ತರ ದರ್ಶನ ಯಾತ್ರಿಕರ ಸಂಖ್ಯೆ 1.8 ಲಕ್ಷದವರೆಗೆ ತಲುಪುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಪವಿತ್ರ 18ಮೆಟ್ಟಿಲುಗಳ ನಿರ್ವಹಣೆಯಲ್ಲೂ ಈ ಬಾರಿ ಹೆಚ್ಚಿನ ಕ್ಷಮತೆ ಸಾಧಿಸಲಾಗಿದ್ದು, ಪ್ರತಿ ನಿಮಿಷಕ್ಕೆ 80-90ಮಂದಿ ಭಕ್ತರು ಆರೋಹಣ ಮಾಡುತ್ತಿದ್ದರು. ಇದು ಹಿಂದಿನ ಅವಧಿಯಲ್ಲಿ 65ರಷ್ಟು ಮಾತ್ರ ಇತ್ತು