Home » ಬರವಣಿಗೆಯಲ್ಲಿ ಧೀರಜ್  ಬೆಳ್ಳಾರೆಯವರ ಗಮನಾರ್ಹ ಸಾಧನೆ
 

ಬರವಣಿಗೆಯಲ್ಲಿ ಧೀರಜ್  ಬೆಳ್ಳಾರೆಯವರ ಗಮನಾರ್ಹ ಸಾಧನೆ

by Kundapur Xpress
Spread the love

ಉಡುಪಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಇವರಿಗೆ  ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ (KABR) ವತಿಯಿಂದ ಜನವರಿ 10, 2025 ರಂದು, ರಾಷ್ಟ್ರೀಯ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು .  ಇವರು  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ  ಯುವ ಮತ್ತು ಉತ್ಸಾಹಭರಿತ ಬರಹಗಾರಾಗಿದ್ದು,”ಸ್ಟೇಟಸ್ ಕಥೆಗಳು” ಎಂಬ ಶೀರ್ಷಿಕೆಯ ಸರಣಿಯಡಿಯಲ್ಲಿ ಜುಲೈ 2020  ರಿಂದ ಡಿಸೆಂಬರ್  2024 ವರೆಗೆ 1,635 ಸಣ್ಣ ಕಥೆಗಳನ್ನು ಬರೆಯುವ ಮೂಲಕ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.

ಈ ಕಥೆಗಳು ಕನ್ನಡ ವೆಬ್ಸೈಟ್ ನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ನೈತಿಕ ಮೌಲ್ಯಗಳು, ಜೀವನ ಪಾಠಗಳು ಮತ್ತು ಪ್ರಬಲ ಸಾಮಾಜಿಕ ಸಂದೇಶಗಳನ್ನು ಉತ್ತೇಜಿಸಲು ಹೆಸರುವಾಸಿಯಾದ ಇವರ ಕಥೆಗಳು ಓದುಗರನ್ನು ಶ್ರೀಮಂತಗೊಳಿಸುವುದಲ್ಲದೆ, ಸಾಮಾಜಿಕ ಯೋಗಕ್ಷೇಮಕ್ಕೂ ಪ್ರಮುಖ ಕೊಡುಗೆ ನೀಡಿವೆ.

ಇವರ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ.

 

Related Articles

error: Content is protected !!