Home » ಸುದಿನ ಕೋಡಿ ಇವರಿಗೆ ಶ್ರೇಷ್ಠ ರೈತ ಪ್ರಶಸ್ತಿ
 

ಸುದಿನ ಕೋಡಿ ಇವರಿಗೆ ಶ್ರೇಷ್ಠ ರೈತ ಪ್ರಶಸ್ತಿ

by Kundapur Xpress
Spread the love

ಕೋಟ : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇದರ 20ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಜಾನುವಾರು, ಕುಕ್ಕುಟ ಮತ್ತು ಮತ್ಸ್ಯ ಮೇಳ – 2025 ಕಾರ್ಯಕ್ರಮದ ಮೀನುಗಾರಿಕೆ ವಿಭಾಗದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ಬ್ರಹ್ಮಾವರ ತಾಲೂಕಿನ, ಕೋಡಿ ಗ್ರಾಮದ ಬಚ್ಚ ಪೂಜಾರಿಯವರ ಪುತ್ರ ಸುದಿನ ಕೋಡಿ ಇವರಿಗೆ ಶ್ರೇಷ್ಠ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.
ಈ ಸಂದರ್ಭ ಬೀದರ್ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎಸ್. ಬಿರಾದಾರ , ಮೀನುಗಾರಿಕೆ ಇಲಾಖೆ ಬೆಂಗಳೂರು ಇದರ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಮೀನುಗಾರಿಕೆ ವಿಶ್ವವಿದ್ಯಾಲಯ ಮಂಗಳೂರು ಡೀನ್ ಡಾ. ಆಂಜನೇಯಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

 

Related Articles

error: Content is protected !!