ಕುಂದಾಪುರ : ಚಿನ್ನ ಕದ್ದು ಪರಾರಿಯಾದ ದಂಪತಿಯನ್ನು ಕೆಲವೇ ಗಂಟೆಗಳಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬೀಚ್ ಬಳಿ ಇರುವ ಉದಯ ಪೂಜಾರಿ ಅವರ ಮನೆಯ ಮೇಜಿನ ಮೇಲೆ ಇಟ್ಟಿದ್ದ ಬ್ಯಾಗ್‌ನ ಜೀಪ್ ತೆಗೆದು ಬ್ಯಾಗ್‌ನಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 16 ಗ್ರಾಂ ತೂಕದ ಚಿನ್ನದ ನೆಕ್ಲಸ್, 16 ಗ್ರಾಂ ತೂಕದ ಬಳೆ ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಮಂಗಳವಾರ ಬೆಳಿಗ್ಗೆ ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನ ಪ್ರಕರಣ ದಾಖಲಾಗುತ್ತಿದ್ದಂತೆಯೇ ಮನೆ ಕಳ್ಳತನದ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಹಾಗೂ ಸಿಬ್ಬಂದಿಗಳಾದ ಶಾಂತರಾಮ, ರಾಜು, ನಾಗರಾಜ, ರಾಘವೇಂದ್ರ, ಸಂದೀಪ ಕುರಣಿ, ಮಾರುತಿ ನಾಯ್ಕಹಾಗೂ ದಿನೇಶ್ ಅವರು, ಪ್ರಕರಣದ ಆರೋಪಿಗಳಾದ ಗುಜ್ಜಾಡಿ ಗ್ರಾಮದ ವಿನಾಯಕ (41) ಮತ್ತು ಪ್ರಮೀಳಾ (30) ದಂಪತಿಯನ್ನು ಬಂಧಿಸಿದ್ದಾರೆ.