Home » ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ
 

ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ

ಸಿ ಎಂಗೆ ಮಾಂಗಲ್ಯ ಸರ ಪೋಸ್ಟ್

by Kundapur Xpress
Spread the love

ಬೆಂಗಳೂರು : ರಾಜ್ಯವ್ಯಾಪಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಳವಾಗಿದ್ದು, ಸಾಲ ಪಡೆದವರು ಇವರ ಕಿರುಕುಳ ತಾಳಲಾರದೆ ಊರುಗಳನ್ನೇ ತೊರೆಯುವಂತಾಗಿದೆ ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಇದರ ಮುಂದುವರಿದ ಭಾಗವಂತೆ ಹಾವೇರಿ ಜಿಲ್ಲೆಯ. ಮಹಿಳೆಯರು ಮಾಂಗಲ್ಯ ಸರವನ್ನು ಉಳಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ ಹಾವೇರಿ ನಗರದ ಅಂಚೆ ಕಚೇರಿ ಮುಂದೆ ಮಾಂಗಲ್ಯ ಸರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಪೋಸ್ಟ್ ಕಳಿಸಿದ್ದಾರೆ.

ಸಾಲ ಕೊಟ್ಟ ಮೈಕ್ರೋ ಫೈನಾನ್ಸ್ ಕಂಪನಿಗಳು ಹಗಲು, ರಾತ್ರಿ ಎನ್ನದೇ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿವೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ. ಮನೆಗೆ ಬಂದರೆ ಇವರ ಕಿರುಕುಳ ಇವರು ಬಂದರೇ ಸುತ್ತಮುತ್ತಲಿನವರ ಮೂದಲಿಕೆ ಕೇಳುವಂತಾಗಿದೆ ಹೀಗಾಗಿ ಕಿರುಕುಳ ತಪ್ಪಿಸಿ, ಮಾಂಗಲ್ಯ ಸರ ಉಳಿಸಿ ಎಂದು ಮಹಿಳೆಯರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಎಸ್ಪಿ ಕಚೇರಿಗೆ ತೆರಳಿದ ಮಹಿಳೆಯರ ದಂಡು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಹಾಗೂ ಡಿಸಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ಹಲವು ಮಹಿಳೆ ಯರು ಊರು ತೊರೆದು ಹೋಗಿರುವ ಘಟನೆಯೂ ಕಳೆದ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು.

 

Related Articles

error: Content is protected !!