ಶಿವಭಾಗ್ ವಾರ್ಡಿನಲ್ಲಿ ಕಾರ್ಯಕರ್ತರ ಸಮಾವೇಶ
ಮಂಗಳೂರು :ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿವಭಾಗ್ ವಾರ್ಡಿನಲ್ಲಿ ಚುನಾವಣಾ ದೃಷ್ಟಿಯಿಂದ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು, ಕಳೆದ 5 ವರ್ಷಗಳ ರಿಪೋರ್ಟ್ ಕಾರ್ಡ್ ಜೊತೆ ಮನೆ ಮನೆಗೆ ಭೇಟಿ ನೀಡಿ ರಾಜ್ಯ ಸರಕಾರದ ಸಾಧನೆಯನ್ನು ತಿಳಿಸಿ ಮತ್ತೆ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬರುವ ದೃಷ್ಟಿಯಿಂದ ಕಾರ್ಯೋನ್ಮುಖರಾಗಬೇಕು ಎಂದರು. ಈಗಾಗಲೇ ಮತದಾರರು ಮಂಗಳೂರು ನಗರ ದಕ್ಷಿಣದಲ್ಲಿ ಬಿಜೆಪಿಯ ಗೆಲುವು ನಿರ್ಧರಿಸಿಯಾಗಿದೆ. ಗೆಲುವಿನ ಅಂತರ ಹೆಚ್ಚಿಸುವ ದೃಷ್ಟಿಯಿಂದ ನಮ್ಮ ಕೆಲಸಗಳಾಗಲಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಕಾವ್ಯಾ ನಟರಾಜ್ ಆಳ್ವ, ಸಮಾವೇಶ ಪ್ರಮುಖ್ ಭಾಸ್ಕರ್ ಚಂದ್ರ ಶೆಟ್ಟಿ, ಮಂಡಲ ಉಪಾಧ್ಯಕ್ಷ ರಮೇಶ್ ಕಂಡೆಟ್ಟು, ಮಂಡಲ ಕಾರ್ಯದರ್ಶಿ ಲಲ್ಲೇಶ್ ಅತ್ತಾವರ, ಪೂರ್ವ ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ರಾಮಚಂದ್ರ ಚೌಟ, ಬೂತ್ ಅಧ್ಯಕ್ಷರಾದ ಉಮೇಶ್ ರೈ, ರಾಜೇಶ್, ದೀಪಕ್ ಶೆಟ್ಟಿ, ಶುಭಂ, ಚುನಾವಣಾ ಪ್ರಭಾರಿ ನಾಗರಾಜ್ ಕೆ, ಮಂಡಲ ಕಾರ್ಯಕಾರಿ ಸದಸ್ಯ ಯೋಗಿಶ್ ಶೆಣೈ, ಶಕ್ತಿ ಕೇಂದ್ರ ಪ್ರಮುಖ್ ನವೀನ್ ಶೆಣೈ, ನಾಗೇಶ್ ಕುದ್ಕೋರಿಗುಡ್ಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು