Home » ಲೆಕ್ಕಾಚಾರದ ದೃಷ್ಟಿ
 

ಲೆಕ್ಕಾಚಾರದ ದೃಷ್ಟಿ

by Kundapur Xpress
Spread the love
  1. ಲೆಕ್ಕಾಚಾರದ ದೃಷ್ಟಿ

ಬದುಕಿನಲ್ಲಿ ಯಾವುದೇ ಕಾರ್ಯವನ್ನು ಕೈಗೊಳ್ಳುವ ಮುನ್ನ ನಮ್ಮ ಮನಸ್ಸಿನಲ್ಲಿ ಸಾಮಾನ್ಯವಾಗಿ ಏಳುವ ಪ್ರಶ್ನೆ ಯಾವುದು? ಇದರಿಂದ ನನಗೇನುಲಾಭ ಸಿಗುತ್ತದೆ, ಎಷ್ಟು ನಷ್ಟವಾಗುತ್ತದೆ ಎನ್ನುವುದೇ ಪ್ರಶ್ನೆ ನಮಗೆ ಲಾಭ ಉಂಟಾಗದು ಎಂದಾದರೆ ನಾವು ಸಾಮಾನ್ಯವಾಗಿ ಯಾವ ಕೆಲಸಕ್ಕೂ ಕೈ ಹಚ್ಚುವವರಲ್ಲ. ಅಷ್ಟೊಂದು ಲೆಕ್ಕಾಚಾರದ ಪ್ರವೃತ್ತಿಯನ್ನು ನಾವು ವ್ಯಾವಹಾರಿಕ ಬದುಕಿನಲ್ಲಿ ಬೆಳಸಿಕೊಂಡಿರುತ್ತೇವೆ. ಲಾಭವೆನ್ನುವುದು ಹಣದ ರೂಪದಲ್ಲೆ ಬರಬೇಕೆಂದೇನೂ ಇಲ್ಲ; ಆದ್ದರಿಂದ ನಮ್ಮ ವರ್ಚಸ್ಸು ಹೆಚ್ಚಿದರೂ ಸರಿಯೇ, ಅಂತಸ್ತು ಎರಿದರೂ ಸರಿಯೇ. ಲಾಭದ ದೃಷ್ಟಿಯಲ್ಲೇ ನಾವು ಕಾರ್ಯಗಳನ್ನು ಕೈಗೊಳ್ಳುವುದರಿಂದ ಅದು ಕೈಗೂಡದಿರುವ ಕಾರಣಕ್ಕೆ ಸಹಜವಾಗಿ ದುಃಖವನ್ನು ಅನುಭವಿಸುತ್ತೇವೆ. ವೇದನೆಯಿಂದ ಪರಿತಪಿಸುತ್ತೇವೆ. ವಿಶೇಷವೆಂದರೆ ಲಾಭ ಬಂದರೂ ನಷ್ಟ ಬಂದರು ನಮಗೆ ದುಃಖ ತಪ್ಪುವುದಿಲ್ಲ! ಏಕೆಂದರೆ ಲಾಭ ಉಂಟಾದಾಗ ಇನ್ನೂ ಹೆಚ್ಚು ಲಾಭ ಬರಲಿಲ್ಲವಲ್ಲ ಎಂದು ದುಃಖಿಸುತ್ತೇವೆ. ಕಡಿಮೆ ಲಾಭ ಬಂದಾಗ ನಿರೀಕ್ಷೆ ಮಾಡಿದಷ್ಟು ಬರಲಿಲ್ಲವಲ್ಲ ಎಂದು ದುಃಖಿಸುತ್ತೇವೆ. ಕಡಿಮೆ ಲಾಭ ಬಂದಾಗ ನಿರೀಕ್ಷೆ ಮಾಡಿದಷ್ಟು ಬರಲಿಲ್ಲವಲ್ಲ ಎಂದು ದುಃಖಿಸುತ್ತೇವೆ. ಹೀಗೆ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡೇ ಮಾಡುವ ಯಾವತ್ತೂ ಕಾರ್ಯಗಳು ದುಃಖವನ್ನಲ್ಲದೆ ಬೇರೇನನ್ನೂ ತರುವುದಿಲ್ಲ ಎನ್ನುವ ಸತ್ಯವನ್ನು ನಾವು ಬದುಕಿನುದ್ದಕ್ಕೂ ಅರಿಯುವುದೇ ಇಲ್ಲ. ಹಾಗಾಗಿಯೇ ಲಾಭದ ದೃಷ್ಟಿಯಲ್ಲಿ ತೊಡುಗುವ ಯಾವುದೇ ಕಾರ್ಯದ ಆರಂಭದಲ್ಲಿದ್ದ ಉತ್ಸಾಹ ಕೊನೆಯವರೆಗೂ ಉಳಿದಿರುವುದಿಲ್ಲ. ಇಷ್ಟಕ್ಕೂ ನಿಜವಾದ ಜೀವನೋತ್ಸಾಹ ಕೊನೆಯವರೆಗೂ ಉಳಿಯುವುದು ಲಾಭಕ್ಕೆ ಹೊರತಾದ ಜೀವನದೃಷ್ಟಿಯನ್ನು ಹೊಂದಿದಾಗ ಮಾತ್ರ ಎನ್ನುವುದು ಸತ್ಯ. ನಿಷ್ಕಾಮ ಕರ್ಮದ  ಹಿಂದಿರುವ ತತ್ವ್ತವೂ ಇದೇ ಆಗಿದೆ. ಫಲವನ್ನು ಅಪೇಕ್ಷೆಪಟ್ಟು ಮಾಡುವ ಯಾವತ್ತೂ ಕಾರ್ಯದಲ್ಲಿ ಇಂದ್ರಿಯ ಸಹಜ ಕಾಮನೆಗಳೆಲ್ಲವೂ ಅಡಗಿರುವುದರಿಂದ ಅಂತ್ಯದಲ್ಲಿ ಅದು ದುಃಖವನ್ನಲ್ಲದೆ ಬೇರೇನನ್ನೂ ತರುವುದಿಲ್ಲ.

   

Related Articles

error: Content is protected !!