Home » ಪುರುಷಾರ್ಥಗಳ ಬೆಳಕು
 

ಪುರುಷಾರ್ಥಗಳ ಬೆಳಕು

by Kundapur Xpress
Spread the love
  1. ಪುರುಷಾರ್ಥಗಳ ಬೆಳಕು

ಸಮತ್ತ್ವದ ಬುದ್ಧಿಯಿಂದ ಫಲಾಪೇಕ್ಷೆ ಇಲ್ಲದೇ ಕರ್ಮಕ್ಕೆ ತೊಡಗಲು ಸಾಧ್ಯವಾಗಬೇಕಾದರೆ ನಮ್ಮ ಬದುಕಿನ ಸಮಸ್ತ ಚಟುವಟಿಕೆಗಳನ್ನು ನಿಯಂತ್ರಸಿ ಸನ್ಮಾರ್ಗದಲ್ಲಿ ನಮ್ಮನ್ನು ನಡೆಸುವ ಮಾರ್ಗದರ್ಶಿ ಸೂತ್ರ ಅಗತ್ಯ. ನಿಜಕ್ಕಾದರೆ ನಮ್ಮ ಬದುಕಿನ ಪುರುಷಾರ್ಥಗಳೇ ಮಾರ್ಗದರ್ಶಿ ಸೂತ್ರಗಳು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೇ ನಾಲ್ಕು ಪುರುಷಾರ್ಥಗಳು. ಇವುಗಳೊಳಗಿನ ಸಂಬಂಧಗಳನ್ನು ನಾವು ಚೆನ್ನಾಗಿ ಅರಿತಿರಬೇಕು. ಮೋಕ್ಷವೇ ನಮ್ಮ ಬದುಕಿನ ಅಂತಿಮ ಗುರಿ ಎನ್ನುವುದರಲ್ಲಿ ಸಂದೇಹವೇ ಬೇಡ. ಆದರೆ ಅಂತಿಮ ಗುರಿಯನ್ನು ತಲುಪಲು ನಮಗೆ ದಾರಿದೀಪವಾಗಿರುವುದೇ ಧರ್ಮ. ಧರ್ಮ ಎಂದರೆ ಯಾವುದು ಅಧರ್ಮವಲ್ಲವೋ ಅದು! ಇಷ್ಟನ್ನು ತಿಳಿದುಕೊಂಡರೆ ಸತ್ಯ, ನ್ಯಾಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮೊದಲಾದ ಸದ್ಗುಣಗಳೆಲ್ಲವೂ ಧರ್ಮವೇ ಆಗಿದೆ. ‘ನಾವೂ ಬದುಕೋಣ, ಎಲ್ಲರನ್ನೂ ಬದುಕಲು ಬಿಡೋಣಎಂಬ ತತ್ತ್ವವನ್ನೇಸರ್ವೇ ಜನಾಃ ಸುಖಿನೋ ಭವಂತುಎಂಬ ಸುಭಾಷಿತ ಸಾರುವುದು? ಯಾರು ಧರ್ಮವನ್ನು ರಕ್ಷಿಸುವರೋ ಅವರನ್ನು ಧರ್ಮವು ರಕ್ಷಿಸುವುದು (ಧರ್ಮೋ ರಕ್ಷಿತ ರಕ್ಷಿತಃ) ಎಂಬ ಉಕ್ತಯನ್ನು ನಾವು ಕೇಳಿಲ್ಲವೇ? ಧರ್ಮದ ನಿಯಂತ್ರಣಕ್ಕೆ ಒಳಪಟ್ಟು ಅರ್ಥವನ್ನು ಗಳಿಸುವುದಕ್ಕೆ ಪ್ರಾಧಾನ್ಯವನ್ನು ನೀಡಬೇಕು ಎಂಬುದೇ ಇಲ್ಲಿರುವ ಇಂಗಿತ. ಇದರಿಂದಾಗಿ ಗಳಿಸಿದ ಸಂಪತ್ತಿಗೆ ಘನತೆಯೂ ಲಭಿಸುತ್ತದೆ. ಸಂಪತ್ತಿನ ಮೇಲೆ ಲೋಭವಾಗಲೀ ಮೋಹವಾಗಲೀ ಉಂಟಾಗದು. ಏಕೆಂದರೆ ಧರ್ಮವೇ ಸಂಪತ್ತಿನ ಸದ್ವಿನಿಯೋಗಕ್ಕೆ ದಾರಿದೀಪವಾಗುತ್ತದೆ. ದಾನಶೀಲತೆಯನ್ನು ಅದು ಸಹಜವಾಗಿಯೇ ಬೆಳೆಸುತ್ತದೆ. ಹಾಗೆಯೆ ಕಾಮನೆಗಳನ್ನು ನಿಯಂತ್ರಿಸುವ ಶಕ್ತಿಯೂ ಧರ್ಮದಿಂದ ಪ್ರಾಪ್ತವಾಗುತ್ತದೆ. ಪರಿಣಾಮವಾಗಿ ಮೋಕ್ಷದ ಹಾದಿ ಸುಗಮವಾಗುತ್ತದೆ.

 

   

Related Articles

error: Content is protected !!