ಮಂಗಳೂರು : ಚುನಾವಣೆ ಹಿನ್ನಲೆಯಲ್ಲಿ ಸತ್ಯಜಿತ್ ಸುರತ್ಕಲ್ ರವರ ಭದ್ರತಾ ಸಿಬ್ಬಂದಿ ಹಾಗೂ ರಿವಾಲ್ವರ್ ಹಿಂಪಡೆದಿರುವುದಕ್ಕೆ ನಳಿನ್ ಕುಮಾರ್ ಕಟೀಲ್ ನೇರ ಹೊಣೆ ಎಂದು ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ
ಚುನಾವಣಾ ನೆಪವೊಡ್ಡಿ ತನ್ನ ಭದ್ರತಾ ಸಿಬ್ಬಂದಿ ಹಾಗೂ ವೈಯಕ್ತಿಕ ರಿವಾಲ್ವರ್ ಅನ್ನು ಪೊಲೀಸ್ ಇಲಾಖೆ ಹಿಂಪಡೆದಿರುವ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ನೇರ ಕೈವಾಡವಿದೆ ಆದ್ದರಿಂದ ನನ್ನ ಹತ್ಯೆಯಾಗದಲ್ಲಿ ಅವರು ಹಾಗೂ ಸಂಘದ ಪರಿವಾರದ ಪ್ರಮುಖರು ನೇರ ಹೊಣೆ ಎಂದು ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಗಂಭೀರ ಆರೋಪ ಮಾಡಿದ್ದಾರೆ
ಶುಕ್ರವಾರ ಮಂಗಳೂರು ನಗರದ ಪ್ರಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆ ಇರುವ ಹಿನ್ನಲೆಯಲ್ಲಿ ಕಳೆದ 16 ವರ್ಷಗಳ ಹಿಂದೆ ಸರ್ಕಾರವೇ ಗನ್ ಮ್ಯಾನ್ ಒದಗಿಸಿತು ವೈಯಕ್ತಿಕ ರಿವಾರ್ ಅನ್ನು ನೀಡಲಾಯಿತು ಆದರೆ ಇಷ್ಟರವರೆಗೆ ಹಿಂಪಡೆಯದ ಭದ್ರತಾ ವ್ಯವಸ್ಥೆ ಹಾಗೂ ರಿವಾಲ್ವರನ್ನು ಈ ಬಾರಿ ಹಿಂಪಡೆಯಲಾಗಿದೆ ಅದಕ್ಕೆ ಬಿಜೆಪಿ ಅಧ್ಯಕ್ಷ ರಾಜ್ಯ ಅಧ್ಯಕ್ಷರೇ ನೇರ ಕಾರಣ ಎಂದರು
ಹಲವು ವರ್ಷಗಳಿಂದ ತನ್ನ ಬಾಯಿ ಮುಚ್ಚಿಸುವ ಯತ್ನ ನಡೆದಿದೆ ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಪ್ರಾಣಭಯವನ್ನು ಮೂಡಿಸುವ ಮೂಲಕ ಪರೋಕ್ಷವಾಗಿ ಬಾಯಿಮುಚ್ಚಿಸಲಾಗಿದೆ ಎಂದು ಹೇಳಿದರು
ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ನನ್ನ ಹತ್ಯೆಗೆ ಪ್ರೇರಣೆ ಕೊಡುವ ಮುಕ್ತ ಅವಕಾಶವನ್ನು ಮಾಡುತ್ತಿದೆ ಅಕಸ್ಮಾತ್ ದುಷ್ಕರ್ಮಿಗಳಿಂದ ನನ್ನ ಬಲಿಯಾದರೆ ಯಾವುದೇ ಸಂಘ ಪರಿವಾರದ ನಾಯಕರು ನನ್ನ ಅಂತಿಮ ದರ್ಶನಕ್ಕೆ ಬರಬಾರದು ಯಾವುದೇ ಕಾರಣಕ್ಕೂ ಮೃತ ದೇಹದ ಮೆರವಣಿಗೆಯನ್ನು ನಡೆಸಬಾರದೆಂದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನಳಿನ್ ಕುಮಾರ್ ಕಟೀಲ್ ಅವರನ್ನು ಜಾತಿವಾದಿ ಎಂದು ಟೀಕಿಸಿದರು