ಕುಂದಾಪುರ : ಆದರ್ಶದ ನುಡಿಯೊಂದಕೇ ಇಲ್ಲಿ ದೊರೆತಿದೆ ಉದಾಹರಣೆ….
ಬಿಜೆಪಿ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಹೊಸತೊಂದು ಆದರ್ಶವನ್ನೇ ತೋರಿ ಗಮನ ಸೆಳೆದಿದೆ. ಕುಂದಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಹಾಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರ ಗೆಲುವಿಗಾಗಿ ಪಣ ತೊಟ್ಟು ಕೆಲಸ ಮಾಡಿದರೆ ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ಟರು ಹಾಲಿ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇತ್ತ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಲಾಲಾಜಿ ಮೆಂಡನ್ ಅವರು ಹಾಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ಗೆಲುವಿಗಾಗಿ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯ ತತ್ವಾದರ್ಶ ಎತ್ತಿ ಹಿಡಿದಿರುವುದು ರಾಜ್ಯಕ್ಕೆ ಒಂದು ಮಾದರಿ ಎಂಬ ಮಾತು ಕೇಳಿ ಬಂದಿದೆ