ಬೈಂದೂರು : ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಉಪ್ಪುಂದ ಬಳಿಯ ಕಂಬದಕೋಣೆಯ ನಿವಾಸಿಯಾದ ಕರುಣಾಕರ ದೇವಾಡಿಗ (24ವರ್ಷ) ಶನಿವಾರ ಮುಂಜಾನೆ ಜೈಲಿನ ಸೆಲ್‌ನಲ್ಲಿ ಮೈ ಉಜ್ಜುವ ನಾರನ್ನೇ ಹಗ್ಗವನ್ನಾಗಿ ಮಾಡಿಕೊಂಡು ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಈತ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮರವಂತೆಯ ಪ್ರಸಿದ್ಧ ವರಾಹ ಸ್ವಾಮಿ ದೇವಸ್ಥಾನದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು ಈತನ ವಿರುದ್ಧ ಬೈಂದೂರು ಠಾಣೆಯಲ್ಲಿ 4 ಪ್ರಕರಣ ದಾಖಲಾಗಿತ್ತು ಈತನು ಮೂಲತಃ ಉಪ್ಪುಂದದ ಕಂಬದಕೋಣೆಯವನಾಗಿದ್ದು ಭದ್ರಾವತಿಯಲ್ಲಿ ಓರ್ವ ಬಿಕ್ಷುಕಿಯ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿದ್ದನು