Home » ಕಾಂಗ್ರೇಸ್‌ ಯೋಜನೆಗೆ ಜನರ ತಿರಸ್ಕಾರ
 

ಕಾಂಗ್ರೇಸ್‌ ಯೋಜನೆಗೆ ಜನರ ತಿರಸ್ಕಾರ

ಅಮಿತ್ ಶಾ

by Kundapur Xpress
Spread the love

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತುಷ್ಟಿಕರಣ ಭ್ರಷ್ಟಾಚಾರ ಕುಟುಂಬ ರಾಜಕಾರಣ ಗ್ಯಾರಂಟಿ ಅಭಿವೃದ್ಧಿ ಶಾಂತಿ ಸಮೃದ್ಧಿ ಸುರಕ್ಷತೆಯೇ ಬಿಜೆಪಿ ಜನತೆಗೆ ನೀಡುವ ಗ್ಯಾರಂಟಿ ಎಂದು ಅಮಿತ್ ಶಾ ನುಡಿದರು ಕಟಪಾಡಿಯಲ್ಲಿ ಶನಿವಾರ ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು

ರಾಜ್ಯದಲ್ಲಿ ಅನೇಕ ಬಾಂಬ್‌ ಸ್ಪೋಟ ಪ್ರಕರಣಗಳನ್ನು ಕಾಂಗ್ರೆಸ್ ಸರಕಾರ ಸರಿಯಾಗಿ ತನಿಖೆ ಮಾಡಿಲ್ಲ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ಮೋದಿ ಸರ್ಕಾರ ಈ ಎಲ್ಲಾ ಪ್ರಕರಣಗಳನ್ನು ಎನ್‌ ಐ ಏ ಗೆ ವಹಿಸಿದೆ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿ ಎಫ್ ಐ ನಿಷೇಧ ಕಾಯ್ದೆ ಮತಾಂತರ ನಿಷೇಧ ಕಾಯ್ದೆಗಳು ರದ್ದಾಗುತ್ತದೆ ಕಾಂಗ್ರೆಸ್ ಅಯೋಧ್ಯ ವಿವಾದವನ್ನು ಬಗೆಹರಿಸಲು ಕಾಗ್ರೇಸ್‌ ಆಸಕ್ತಿ ತೋರಲಿಲ್ಲ ಆದರೆ ಮೋದಿ ಸರ್ಕಾರ ರಾಮಮಂದಿರ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ ರಾಮ ಹುಟ್ಟಿದ ಸ್ಥಳದಲ್ಲೇ ಮಂದಿರ ತಲೆ ಎತ್ತುವಂತೆ ಮಾಡಿದೆ ಎಂದು ಅಮಿತ್ ಶಾ ಹೇಳಿದರು

ಭಾರತದ ಸಮಗ್ರ ನಕ್ಷೆಯಲ್ಲಿ ನಾರಾಯಣ ಗುರುಗಳು ಪ್ರಕಾಶಮಾನರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದರು ಕೋಟಿ ಕೋಟಿ ಯುವಕರ ಹೃದಯದಲ್ಲಿ ಗುರುಗಳು ನಡೆಸಿದ್ದಾರೆ ಶಿಕ್ಷಣ ಒಂದು ಕಾಲದಲ್ಲಿ ಒಂದು ವರ್ಗಕ್ಕೆ ಸೀಮಿತವಾಗಿದ್ದು ಕಾಲಘಟ್ಟದಲ್ಲಿ ಅವರು ಹಿಂದುಳಿದ ವರ್ಗದವರಿಗೂ ಈ ಅವಕಾಶವನ್ನು ಕಲ್ಪಿಸಿ ಧರ್ಮ ಸಂರಕ್ಷಣೆ ಸೇವೆ ಮಾಡಿದ್ದಾರೆ ಎಂದು ಶ್ರೀ ನಾರಾಯಣ ಗುರುಗಳನ್ನು ಸ್ಮರಿಸಿದರು

ವೇದಿಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭ್ಯರ್ಥಿಗಳಾದ ಗುರ್ಮೆ ಸುರೇಶ್ ಶೆಟ್ಟಿ ಯಶ್ ಪಾಲ್ ಸುವರ್ಣ ಶಾಸಕರಾದ ರಘುಪತಿ ಭಟ್ ಲಾಲಾಜಿ ಮೆಂಡನ್‌ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್ ವಿಭಾಗ ಪ್ರಭಾವಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಪಕ್ಷದ ಚುನಾವಣಾ ಉಸ್ತುವಾರಿ ವಿಜಯೇಂದ್ರ ಗುಪ್ತ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ  ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು

   

Related Articles

error: Content is protected !!