Home » ಕೊಲ್ಲೂರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
 

ಕೊಲ್ಲೂರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

by Kundapur Xpress
Spread the love

ಕೊಲ್ಲೂರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲದಲ್ಲಿ ಆರಂಭಗೊಂಡ ಅಷ್ಟ ಬಂಧ ಬ್ರಹ್ಮ ಕಲಶೋತ್ಸವದ ಅಂಗವಾಗಿ ದೇಗುಲದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಪ್ರಸಾದ ಶುದ್ದಿ ಲಿಂಗ ಶುದ್ದಿ ಶಕ್ತಿ ಹೋಮ ಆಧಿವಾಸ  ಹೋಮ ಪೀಠವಾಸ ಕ್ಷೇತ್ರಪಾಲ ಪೂಜೆ ಮುಂತಾದ ಹೋಮ ಹವನಗಳು ನಡೆಯಿತು

ಅಷ್ಟ ಬಂಧ ಬ್ರಹ್ಮ ಕಲಶೋತ್ಸವದ ಅಂಗವಾಗಿ ಸ್ವರ್ಣಮುಖಿ ಕಲ್ಯಾಣ ಮಂಟಪದಲ್ಲಿ ಪ್ರತಿದಿನ ರಾತ್ರಿ ದೇಶದ ನಾನಾ ಭಾಗದ ಕಲಾವಿದರಿಂದ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಲಿದ್ದು ದೇವಸ್ಥಾನದ ವ್ಯವಸ್ಥಾಪನ  ಸಮಿತಿಯ ಸದಸ್ಯೆಯಾದ ರತ್ನ ರಮೇಶ್ ಕುಂದರ್ ರವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಅಷ್ಟಬಂಧ ಬ್ರಹ್ಮಕಲಾಶೋತ್ಸವಕ್ಕೆ ಭಕ್ತರಿಂದ ಹೊರೆಕಾಣಿಕೆ ಕೂಡ ಬರಲು ಪ್ರಾರಂಭಗೊಂಡಿದೆ ಬಂದ ಹೊರೆಕಾಣಿಕೆ ಪೂಜೆ ಮಾಡಿ ಹೊರೆ ಕಾಣಿಕೆ ತಂದ ಭಕ್ತರಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು

ದೇವಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ರವಿ ಕೊಟ್ಟಾರಗಸ್ತಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಸದಸ್ಯರಾದ ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಬೆಳ್ವೆ ಗಣೇಶ್ ಕಿಣಿ,  ಶೇಖರ್ ಪೂಜಾರಿ, ಗೋಪಾಲಕೃಷ್ಣ ನಾಡ, ಸಂದ್ಯಾ ರಮೇಶ್, ರತ್ನ ರಮೇಶ್ ಕುಂದರ್, ಹಾಗೂ ಪುರೋಹಿತರು ನರಸಿಂಹ ಅಡಿಗ ಗೋವಿಂದ ಅಡಿಗ ಶ್ರೀಧರ್ ಅಡಿಗ ಹಾಗೂ ಗೋವಿಂದ ನಾಯ್ಕ ಉಪಸ್ಥಿತರಿದ್ದರು ಇಂದು ಮತ್ತು ನಾಳೆ  ಎರಡು ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲವೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ

   

Related Articles

error: Content is protected !!