ಕುಂದಾಪುರ: ಕುಂದಾಪುರ ನಗರದ ಹಳೇ ಬಸ್ಟ್ಯಾಂಡ್ ವಠಾರದ ಪನ್ನೀರ್ ಜ್ಯುವೆಲ್ಲರ್ಸ್ ಬಳಿಯಲ್ಲಿ ನಿನ್ನೆ ರಾತ್ರಿ 89 ಲಕ್ಷದ 1 ಸಾವಿರದ 600 ರೂ. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ಸಿ ಎಂ ಎಸ್ ಕಂಪೆನಿಗೆ ಸೇರಿದ ಖಾಸಗಿ ವಾಹನದಲ್ಲಿ ಹಣವನ್ನು ಸಾಗಿಸಲಾಗುತ್ತಿದ್ದು ಕುಂದಾಪುರದ ಫ್ಲೈಯಿಂಗ್ ಸ್ಕ್ವಾಡ್ ನವರು ಹಣವನ್ನು ವಶಪಡಿಸಿಕೊಂಡು ತನಿಖೆ ನಡೆಸತ್ತಿದ್ದಾರೆ
ವಿವಿಧ ಬ್ಯಾಂಕ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡ ಸಿ ಎಂ ಎಸ್ ಕಂಪೆನಿಯವರು ವಿವಿಧ ಬ್ಯಾಂಕ್ಗಳ ಏಟಿಎಂ ಗೆ ಹಣವನ್ನು ತುಂಬಿಸಲು ಸಾಗುತ್ತಿದ್ದು ಯಾವುದೇ ಭದ್ರತಾ ಸಿಬ್ಬಂದಿಯನ್ನು(Security Guard)ಹೊಂದಿಲ್ಲದೇ ಕರ್ತವ್ಯ ಲೋಪವನ್ನು ಎಸಗಿರುವುದರಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ
ಕುಂದಾಪುರ ಪೋಲೀಸರ ಸಹಕಾರದೊಂದಿಗೆ ಕುಂದಾಪುರದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಯಾದ ಲಕ್ಷಣ್ ನವರ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಸಲಾಗಿದೆ