Home » ಕರ್ತೃವೆಂಬ ಅಹಂಭಾವ
 

ಕರ್ತೃವೆಂಬ ಅಹಂಭಾವ

by Kundapur Xpress
Spread the love

 

  1. ಕರ್ತೃವೆಂಬ ಅಹಂಭಾವ

ಸಂಪತ್ತು ಗಳಿಸುವ ಏಕೈಕ ಉದ್ದೇಶದಿಂದ ಯಾರು ಕರ್ಮಕ್ಕೆ ತೊಡಗಲಾರರು. ಸಂಪತ್ತು ಯಾವತ್ತೂ ಕರ್ಮಫಲವಾಗಿ ಲಭಿಸುವುದೇ ಹೊರತು ಅದರ ಗಳಿಕೆ ತನ್ನಷ್ಟಕ್ಕೆ ತಾನೇ ಉದ್ದೇಶವಾಗಲಾರದು. ಆದರೂ ನಾವೆಲ್ಲರೂ ನಮ್ಮ ಸ್ವಭಾವಕ್ಕೆ ಅನುಗುಣವಾದ ಕರ್ಮದಲ್ಲಿ ತೊಡಗಬೇಕೆಂದೇ ಗೀತೋಪದೇಶದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಹಾಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲೇಬೇಕಾದ ಕರ್ಮಗಳಲ್ಲಿ ನಾವು ನಮ್ಮನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಾರದೆಂಬ ಎಚ್ಚರಿಕೆಯನ್ನೂ ಶ್ರೀ ಕೃಷ್ಣ ನೀಡುತ್ತಾನೆ. ಪ್ರಾಪಂಚಿಕ ವ್ಯವಹಾರಗಳಲ್ಲಿ ಸದಾ ವ್ಯವಸ್ತರಾಗಿರುವ ನಮಗೆ ಕೃಷ್ಣನ ಮಾತು ಮೇಲ್ನೋಟಕ್ಕೆ ಸಹಜವಾಗಿಯೇ ತೀರ ವಿಚಿತ್ರವಾಗಿ ಕಂಡಿತು. ನಮ್ಮ ನಮ್ಮ ಕರ್ಮಗಳಲ್ಲಿ ನಾವು ತೊಡಗಬೇಕು, ಆದರೆ ಹಾಗೆ ತೊಡಗಿಕೊಂಡಿರುವಾಗ ನಮ್ಮನ್ನು ನಾವು ಕಳೆದುಕೊಳ್ಳಬಾರದು ಎಂದರೆ ಏನರ್ಥ? ಕೃಷ್ಣ ಭೋಧಿಸುವಅನಾಸಕ್ತಿಗೂ ನಾವು ತೀವ್ರವಾಗಿ ಆಸಕ್ತಿಯನ್ನು ಹೊಂದಿದ್ದೇವೆ ಎಂದರೆ ಅದರೊಳಗೆ ಅಡಕವಾಗಿರುವ ಭಾವ ಏನು ಎಂಬುದನ್ನು ನಾವು ಗಮನಿಸಬೇಕು. ಅದು ನಿಶ್ಚಿತವಾಗಿಯೂ ಹೀಗಿದೆ: ಕರ್ಮದ ಕರ್ತೃ ನಾನೇ ಆಗಿದ್ದೇನೆ. ಕರ್ಮ ನನ್ನ ಶಕ್ತಿಸಾಮಥ್ರ್ಯದ ಬಲದಲ್ಲೇ ಸಾಧ್ಯವಾಗುತ್ತಿದೆ. ಇದರಿಂದ ನನಗೆ ಅಪಾರವಾದ ಕೀರ್ತಿ, ಸಂಪತ್ತು, ಜನಪ್ರಿಯತೆ ಲಭಿಸಲಿದೆ. ಸಮಾಜದಲ್ಲಿ ನಾನು ಪ್ರತಿಷ್ಠಿತ ವ್ಯಕ್ತಿ ಎನಿಸಿಕೊಳ್ಳಬಲ್ಲೆ; ಜನರು ನನ್ನ ಬುದ್ಧಿವಂತಿಕೆ, ಶಕ್ತಿ, ಸಾಮಥ್ರ್ಯವನ್ನು ಕೊಂಡಾಡುತ್ತಾರೆ. ಪ್ರಪಂಚದಲ್ಲಿ ನನ್ನ ಹೆಸರು ನೂರ್ಕಾಲ ಬಾಳಿ ಬೆಳಗುತ್ತದೆ! ಕರ್ಮದ ಕರ್ತೃ ನಾನೇ ಎಂಬ ಅಹಂಭಾವವನ್ನು ಹೊಂದಿದಾಗ ಮುಂದೆ ಅದರಿಂದಾಗುವ ಅನರ್ಥಗಳನ್ನು ನಾವು ಅನುಭವಿಸಬೇಡವೇ? ಆದರೆ ಅನರ್ಥಗಳ ಬಗ್ಗೆ ನಮಗೆ ಕಿಂಚಿತ್ ಅರಿವು ಕೂಡ ಇರುವುದಿಲ್ಲ. ಯಾಕೆಂದರೆ ನಾವು ಯಾವತ್ತೂ ನಮಗೆ ಅಪೇಕ್ಷಣೀಯವಾದುದನ್ನೇ ಹಂಬಲಿಸುತ್ತೇವೆ!

   

Related Articles

error: Content is protected !!