ಕಾರ್ಕಳ : ಕೇವಲ ವೈಯುಕ್ತಿಕ ನಿಂದನೆ ಮತ್ತು ಅಪಪ್ರಚಾರವನ್ನೇ ಬಂಡವಾಳವಾಗಿರಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್, ಕಾರ್ಕಳ ಕ್ಷೇತ್ರದ ಸುಸಂಸ್ಕೃತ ಮತ್ತು ಸಜ್ಜನಿಕೆಯ ಮನಸ್ಸುಗಳನ್ನು ಕದಡುವ ಕೆಲಸವನ್ನು ಮಾಡುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಶ್ರೀ ವಿ.ಸುನಿಲ್ ಕುಮಾರ್ ಬಜಗೋಳಿ ಪೇಟೆಯಲ್ಲಿ ಜರುಗಿದ ಚುನಾವಣಾ ಪ್ರಚಾರ ಭಾಷಣದಲ್ಲಿ ಕರೆ ನೀಡಿದರು.
ಬಿಜೆಪಿ ಪ್ರಮುಖರಾದ ಮಣಿರಾಜ್ ಶೆಟ್ಟಿ , ಕೆಪಿ ಶೆಣೈ, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ ,ಶಶಿಧರ್ ಶೆಟ್ಟಿ ಬರೊಡ, ಸದಾಶಿವ ಸಾಲಿಯಾನ್ ಹರೀಶ್. ಡಿ. ಸಾಲಿಯಾನ್ ಪುಣೆ,ಸಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯಕೋಟ್ಯಾನ್, ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ, ಅಲ್ಪಸಂಖ್ಯಾತ ಮೊರ್ಚಾದ ಜೆರಾಲ್ಡ್ ಡಿ ಸಿಲ್ವ ಉಪಸ್ಥಿತರಿದ್ದರು .ಸುರೇಶ್ ಸಾಲ್ಯಾನ್ ಮುಡಾರು ಕಾರ್ಯಕ್ರಮ ನಿರೂಪಣೆ ಮಾಡಿದರು