ಕುಂದಾಪುರ : ದಕ್ಷಿಣ ಕನ್ನಡದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು ಭಾರತೀಯ ಜನತಾ ಪಾರ್ಟಿಯು ಆರು ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದು ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಜಯಶಾಲಿಯಾಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ರಾಜೇಶ್ ನಾಯಕ್ ಅವರು 93,324 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾದ ರಾಮಾನಾಥ್ ರೈ ಅವರನ್ನು ಹಾಗೂ ಎಸ್.ಡಿ.ಪಿ.ಐ ಅಭ್ಯರ್ಥಿಯಾದ ಇಲ್ಯಾಸ್ ತುಂಬೆ ಇವರನ್ನು ಸೋಲಿಸಿದ್ದಾರೆ ಇವರ ಗೆಲುವಿನ ಅಂತರ 8,282 .
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಡಾ. ವೈ ಭರತ್ ಶೆಟ್ಟಿ ಇವರು 1,03,531 ಮತಗಳನ್ನು ಗಳಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾದ ಇನಾಯತ್ ಅಲಿ ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಮೊಯಿದ್ದೀನ್ ಇವರನ್ನು ಸೋಲಿಸಿದ್ದಾರೆ ಇವರು 32,922 ಮತಗಳ ಅಂತರದಿಂದ ಗೆದ್ದಿದ್ದಾರೆಬೆಳ್ತಂಗಡಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಹರೀಶ್ ಪೂಂಜಾ ಇವರು 1,01,004 ಮತಗಳನ್ನು ಗಳಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಿತ್ ಶಿವರಾಂ ರನ್ನು ಸೋಲಿಸಿದ್ದಾರೆ ಇವರು 18,216 ಮತಗಳ ಅಂತರದಿಂದ ಗೆದ್ದಿದ್ದಾರೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅಶೋಕ್ ರೈ ಇವರು 66,607 ಮತಗಳನ್ನು ಗಳಿಸಿದ್ದುಇಂಡಿಪೆಂಡೆಂಟ್ ಅಭ್ಯರ್ಥಿಯಾದ ಅರುಣ್ ಪುತ್ತಿಲ ಹಾಗೂ ಬಿಜೆಪಿ ಅಭ್ಯರ್ಥಿಯಾದ ಆಶಾ ತಿಮ್ಮಪ್ಪ ರನ್ನು ಸೋಲಿಸಿದ್ದಾರೆ ಇವರು 4,149 ಮತಗಳ ಅಂತರದಿಂದ ಗೆದ್ದಿದ್ದಾರೆ
ಸುಳ್ಯ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಯಾದ ಭಾಗೀರಥಿ ಮುರುಳ್ಯ ಇವರು93,911 ಮತಗಳನ್ನು ಗಳಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾದ ಕೃಷ್ಣಪ್ಪ ಇವರನ್ನು ಸೋಲಿಸಿದ್ದಾರೆ.ಇವರು 30,874 ಮತಗಳ ಅಂತರದಿಂದ ಜಯಗಳಿಸಿದ್ದಾರೆ