Home » ರಾಜ್ಯಕ್ಕೆ ಮಾದರಿಯಾದ ಉಡುಪಿ
 

ರಾಜ್ಯಕ್ಕೆ ಮಾದರಿಯಾದ ಉಡುಪಿ

by Kundapur Xpress
Spread the love

ಕುಂದಾಪುರ: ಕರ್ನಾಟಕ ಕರಾವಳಿ ಭಾಗದ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯ ಬಿಜೆಪಿ ಘಟಕಕ್ಕೆ ಉಡುಪಿ ಜಿಲ್ಲೆಯು ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದ್ದು ರಾಜ್ಯದಲ್ಲಿನ ಕಾಂಗ್ರೇಸ್‌ ನ ಸುನಾಮಿ ಅಲೆಗೆ ಹಿಂದುತ್ವದ ಅಲೆಯೇ ತಡೆಗೋಡೆಯಾಗಿದೆ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯಶ್‌ಪಾಲ್‌ ಸುವರ್ಣ ರವರು 97,079 ಮತಗಳನ್ನು ಪಡೆದರೆ ಕಾಂಗ್ರೇಸ್‌ ನ ಪ್ರಸಾದ್‌ ರಾಜ್‌ ಕಾಂಚನ್‌ 64,303 ಮತಗಳನ್ನು ಪಡೆದಿದ್ದಾರೆ  ಯಶ್‌ಪಾಲ್‌ ಸುವರ್ಣ ರವರು 32,776 ಮತಗಳ ಅಂತರದಿಂದ ಗೆದ್ದಿದ್ದಾರೆ

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗುರ್ಮೆ ಸುರೇಶ್‌ ಶೆಟ್ಟಿಯವರು 80,559 ಮತಗಳನ್ನು ಪಡೆದಿದ್ದು ಕಾಂಗ್ರೇಸ್‌ ನ ವಿನಯ್‌ ಕುಮಾರ್‌ ಸೊರಕೆಯವರು 67,555 ಮತಗಳನ್ನಷ್ಟೇ ಪಡೆದರು  ಗುರ್ಮೆ ಸುರೇಶ್‌ ಶೆಟ್ಟಿಯವರು 13,004 ಮತಗಳಿಂದ ವಿಜಯಿಯಾದರು

ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ವಿ ಸುನಿಲ್‌ ಕುಮಾರ್‌ 77,028 ಮತಗಳನ್ನು ಪಡೆದು 4,602 ಮತಗಳ ಅಂತರದಿಂದ ಕಾಂಗ್ರೇಸ್‌ ನ ಮುನಿಯಾಲು ಉದಯ್‌ ಶೆಟ್ಟಿಯವರನ್ನು ಸೋಲಿಸಿದರು

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಿರಣ್‌ ಕುಮಾರ್‌ ಕೊಡ್ಗಿಯವರು1,02,424 ಮತಗಳನ್ನು ಪಡೆದು 41,556 ಮತಗಳ ಭಾರಿ ಅಂತರದಿಂದ ಕಾಂಗ್ರೇಸ್‌ ನ ದಿನೇಶ್‌ ಹೆಗ್ಡೆ ಮೊಳಹಳ್ಳಿಯವರನ್ನು ಸೋಲಿಸಿದರು

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗುರುರಾಜ್‌ ಗಂಟಿಹೊಳೆಯವರು 98,628 ಮತಗಳನ್ನು ಪಡೆದು ಕಾಂಗ್ರೇಸ್‌ ನ ಹಳೇ ಹುಲಿಯಾದ ಗೋಪಾಲ್‌ ಪೂಜಾರಿಯವರನ್ನು 16,153 ಮತಗಳ ಅಂತರದಿಂದ ಸೋಲಿಸಿದರು

   

Related Articles

error: Content is protected !!