ಪಂಜಾಬ್ : ಭಜರಂಗದಳ ವಿಚಾರಕ್ಕೆ ಸಂಭಂಧಿಸಿದಂತೆ ಮಾನಹಾನಿಕರ ಹೇಳಿಕೆಯ ಬಗ್ಗೆ ದೂರು ದಾಖಲಿಸಿಕೊಂಡ ಪಂಜಾಬ್ ನ ಸಂಗ್ರೂರ್ ಕೋರ್ಟ್ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಮನ್ಸ್ ಜಾರಿಮಾಡಿದೆ
ಇತ್ತೀಚಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಜರಂಗದಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅರೋಪಿಸಲಾಗಿದ್ದು ಹಿಂದೂ ಸುರಕ್ಷಾ ಪರಿಷತ್ ನ ಸಂಸ್ಥಾಪಕರಾದ ಹಿತೇಶ್ ಭಾರಾದ್ವಾಜ್ ರವರು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು