ಬೆಂಗಳೂರು : ಕಳೆದ 4 ದಿನಗಳಿಂದ ಕಾಂಗ್ರೇಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದ್ದ ಮುಖ್ಯಮಂತ್ರಿ ಹುದ್ದೆ ಕೊನೆಗೂ ಸಿದ್ದರಾಮಯ್ಯನವರಿಗೆ ಒಲಿದು ಬಂದಿದೆ
ಮೇ 20 ರಂದು ಶನಿವಾರ ಬೆಂಗಳೂರಿನ ಕಂಠಿರವ ಸ್ಟೇಡಿಯಂನಲ್ಲಿ ಪ್ರಮಾಣವಚನ ನಡೆಯಲಿದ್ದು ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮಧ್ಯೆ ಎರಡುವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ
75 ವರ್ಷ ವಯಸ್ಸಿನ ಕುರುಬ ಜನಾಂಗದ ಮುಖಂಡರಾಗಿರುವ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ 2ನೇ ಭಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ
ಸಿದ್ದರಾಮಯ್ಯನವರು ತನ್ನ ರಾಜಕೀಯ ಜೀವನವನ್ನು ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡು ನಂತರ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯದಲ್ಲಿ ಅಹಿಂದ್ ಸಮಾವೇಶಗಳನ್ನು ಸಂಘಟಿಸಿ ಜನಪ್ರಿಯಗೊಂಡರು ಕರ್ನಾಟಕ ರಾಜ್ಯದ ಕಾಂಗ್ರೇಸ್ ಆಡಳಿತದಲ್ಲಿ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಿದ್ದರಾಮಯ್ಯನವರು ಎರಡನೇ ಸ್ಥಾನದಲ್ಲಿದ್ದಾರೆ ಮೊದಲು ದೇವರಾಜ್ ಅರಸ್ ರವರು ಐದು ವರ್ಷಗಳ ಕಾಲ ಅಧಿಕಾರವನ್ನು ಪೂರೈಸಿದ ಮೊದಲ ವ್ಯಕ್ತಿಯಾಗಿದ್ದಾರೆ ಇತ್ತೀಚಿಗೆ ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಗೆಲುವು ಸಾಧಿಸಿದ 136 ಶಾಸಕರಲ್ಲಿ ಸಿದ್ದರಾಮಯ್ಯನವರು 85 ಶಾಸಕರ ಬೆಂಬಲವನ್ನು ಹೊಂದಿದ್ದಾರೆಂದು ತಿಳಿದುಬಂದಿದೆ