Home » ಯತ್ರ ಪೂಜ್ಯಂತೆ……..
 

ಯತ್ರ ಪೂಜ್ಯಂತೆ……..

by Kundapur Xpress
Spread the love

ಯತ್ರ ಪೂಜ್ಯಂತೆ……..

ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಆದರದ ಭಾವದಿಂದ ನೋಡಿಕೊಳ್ಳುತ್ತಾರೋ  ಅಲ್ಲಿ ದೇವತೆಗಳು ವಾಸವಾಗಿರುತ್ತಾರೆಂದು  ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.   ವಿದ್ಯೆಗೆ ಅಧಿಪತಿ ಹೆಣ್ಣು  ಶಾರದಾ ಮಾತೆ, ಸಂಪತ್ತಿಗೆ ಅಧಿಪತಿ ಹೆಣ್ಣು , ಲಕ್ಷ್ಮೀದೇವಿ , ಆಹಾರ ಸಿಗಬೇಕಾದರೆ ಅಧಿಪತಿ ಹೆಣ್ಣು  ಮಾತೆ ಅನ್ನಪೂರ್ಣೇಶ್ವರಿ, ಪ್ರಕೃತಿ ಕೂಡ ಹೆಣ್ಣು

ಹೆಣ್ಣು ಸಮಾಜದಲ್ಲಿ  ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾಳೆ. ತಾಯಿಯಾಗಿ , ಸಹೋದರಿಯಾಗಿ , ಅರ್ಧಾಂಗಿಯಾಗಿ   ಸಂಸಾರದಲ್ಲಿ  ನೆಲೆಸುತ್ತಾಳೆ. ಪುರಾಣಗಳಲ್ಲಿಯೂ ಹೆಣ್ಣಿಗೆ   ಪೂಜ್ಯವಾದಂತಹ ಸ್ಥಾನವಿದೆ. ಆಧುನಿಕ ಸಮಾಜದಲ್ಲಿ   ಹೆಣ್ಣು ಗಂಡಸರಿಗೆ   ಸರಿಸಮಾನವಾಗಿ ಎಲ್ಲಾ  ಕ್ಷೇತ್ರಗಳಲ್ಲೂ  ಸಾಧನೆಯನ್ನು ಮಾಡಿದ್ದಾಳೆ. ಗಣಿತ ಕ್ಷೇತ್ರದಲ್ಲಿ  ಶಕುಂತಲಾ ದೇವಿ , ತಂತ್ರಜ್ಞಾನ ಕ್ಷೇತ್ರದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ,ದಾದಿಯರ ಕ್ಷೇತ್ರದಲ್ಲಿ , ಕ್ರೀಡಾಕ್ಷೇತ್ರದಲ್ಲಿ , ಬಾಹ್ಯಾಕಾಶ ಕ್ಷೇತ್ರದಲ್ಲಿ , ತರಹ ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ತನ್ನದೇ ಆದಂತಹ ಸ್ಥಾನವನ್ನು  ಪಡೆದಿದ್ದಾಳೆ. ಪ್ರತಿ  ಗಂಡಿನ ಯಶಸ್ಸಿನ ಹಿಂದೆ  ಒಬ್ಬಳು ಹೆಣ್ಣು ಇರುತ್ತಾಳೆ ಎಂಬ  ಮಾತಿದೆ. ಹೆಣ್ಣೆಂದರೆ ಸಂಸಾರದ ಕಣ್ಣು . ಪುರಾಣಗಳಲ್ಲಿ  ಪಂಚಪತಿವ್ರತೆಯರ  ಹೆಸರುಗಳನ್ನು ಉಲ್ಲೇಖಿಸಲಾಗಿದೆಪತಿವ್ರತೆಯರ  ಶಕ್ತಿಯಿಂದಲೇ  ಅವರ ಗಂಡಂದಿರು  ಉನ್ನತವಾದ  ಸ್ಥಾನ ಪಡೆಯಲು  ಸಾಧ್ಯವಾಯಿತೆಂಬುದು ಪುರಾಣಗಳಲ್ಲಿ  ಉಲ್ಲೇಖಿಸಲಾಗಿದೆ

ಪ್ರದೀಪ್‌,ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!