Home » ಮೋಹ ಪರವಶತೆ
 

ಮೋಹ ಪರವಶತೆ

by Kundapur Xpress
Spread the love

ಇತರರು ತಮ್ಮ ಬದುಕಿನಲ್ಲಿ ಎಷ್ಟು ದುಃಖಿಗಳಾಗಿದ್ದಾರೆ ಎಂದು ತಿಳಿಯುವ ಮೂಲಕವೇ ನಾವು ಬದುಕಿನಲ್ಲಿ ಸುಖಿಗಳೆಂದು ತಿಳಿಯುವುದು ಸುಲಭವಾಗುತ್ತದೆ. ನಮ್ಮ ಸುಖದ ಪರಿಕಲ್ಪನೆ ಯಾವತ್ತೂ ನಮಗಿಂತ ಸುಖದಲ್ಲಿ ಇರುವವರನ್ನು ನಮ್ಮೊಡನೆ ಹೋಲಿಸಿಕೊಳ್ಳುವುದಕ್ಕೇ ಸೀಮಿತವಾಗಿರುತ್ತದೆಯೇ ವಿನಾ ಹಾಗೆ ಸುಖದಲ್ಲಿರುವವರ ದುಃಖಗಳನ್ನು ಪತ್ತೆ ಹಚ್ಚುವುದರಲ್ಲಿ ಅಲ್ಲ! ಇತರರ ದುಃಖಗಳನ್ನು ಅರಿಯುವ ಮೂಲಕ ನಾವು ನಮ್ಮ ಅಹಂಕಾರದ ಮೇಲೆಯೂ ಅಂಕುಶವನ್ನು ಹಾಕಬಹುದು. ಇಷ್ಟಕ್ಕೂ ನಾವೇಕೆ ದುಃಖಿಗಳಾಗುತ್ತೇವೆ ಎಂಬ ಬಗ್ಗೆ ವಿಚಾರ ಮಾಡುವುದು ಅಗತ್ಯ. ಆಸಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿರುವುದನ್ನು ನಾವು ಚೆನ್ನಾಗಿ ಬಲ್ಲೆವು. ಆಸೆ ಎನ್ನುವುದು ಕೂಡ ನಮ್ಮಲ್ಲಿ ಏಕೆ ಮತ್ತು ಹೇಗೆ ಉತ್ಪನ್ನವಾಗುತ್ತದೆ ಎಂಬುದನ್ನು ನಾವು ತಿಳಿಯಬೇಡವೆ? ಮೋಹ ಪರವಶತೆ ಫಲಿತಾಂಶವಾಗಿಯೇ ನಮ್ಮಲ್ಲಿ ಆಸೆ ಅಂಕುರಿಸುತ್ತದೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ಪ್ರಕೃತಿಯ ಗುಣಗಳಿಂದ ಮೋಹಪರವಶನಾದವನು ಗುಣ ಮತ್ತು ಕರ್ಮಗಳಲ್ಲಿ ಆಸಕ್ತನಾಗಿರುತ್ತಾನೆ. ಇದರಲ್ಲಿ ಸಂಪೂರ್ಣ ತಲ್ಲೀನನಾದವನು ಸುಲಭವಾಗಿ ಮೋಹ ಪರವಶನಾಗಿ ಬಿಡುತ್ತಾನೆ. ಏಕೆಂದರೆ ಅಹಂಕಾರದಿಂದ ಮೋಹ ಪರವಶವಾದ ಅಂತಃಕರಣವುಳ್ಳವನು ನಾನೇ ಕರ್ತೃವಾಗಿದ್ದೇನೆ ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ. ಎಲ್ಲ ಕರ್ಮಗಳ ಕರ್ತೃ ನಾನೇ ಎಂಬ ಭಾವನೆಯೇ ಸರ್ವ ದುಃಖ ಮೂಲವಾಗಿ ಪರಿಣಮಿಸುತ್ತದೆ. ಏಕೆಂದರೆ ನನ್ನೆಲ್ಲ ಆಸೆ – ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಶಕ್ತಿ, ಸಂಪನ್ಮೂಲ ಹಾಗೂ ಛಲ ನನ್ನಲ್ಲಿದೆ ಎಂಬ ಭ್ರಮೆಯು ನಿಶ್ಚಿತವಾಗಿ ಮನಸ್ಸಿನಲ್ಲಿ ಬಲಿಯತೊಡಗುತ್ತದೆ. ಇಂತಹ ಭ್ರಮೆ ಬಲಿಯುವ ಮೂಲಕ ಮನುಷ್ಯ ಮನೋಪರವಶತೆಗೆ ಗುರಿಯಾಗುತ್ತಾನೆ. ಆಸೆಗಳ ಬೆನ್ನು ಹತ್ತುತ್ತಾನೆ. ನಿರಂತರ ದುಃಖಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾನೆ

   

Related Articles

error: Content is protected !!