ಆದ್ಯಪ್ಪಾಡಿ ಆದಿನಾಥೇಶ್ವರ ದೇವಸ್ಥಾನ ಕ್ಷೇತ್ರ ಇರುವುದು ಮಂಗಳೂರಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಆದ್ಯಪಾಡಿ ಎಂಬಲ್ಲಿ ನಿಸರ್ಗದ ಮಡಿಲಲ್ಲಿರುವ ಈ ಸುಂದರ ದೇವಸ್ಥಾನ ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ
ಈ ದೇವಸ್ಥಾನದಲ್ಲಿ ಕೊಡುವ ಗಂಧ ಪ್ರಸಾದವನ್ನು ಸೇವಿಸಿದರೆ ಉಸಿರಾಟದ ಮತ್ತು ಅಸ್ತಮಾ ಕಾಯಿಲೆ ನಿವಾರಣೆಯಾಗುತ್ತದೆ ಇದಕ್ಕೆ ಇಲ್ಲಿಯ ಪ್ರಸಾದವನ್ನು ಸೇವಿಸಿ ಗುಣಮುಖರಾಗಿ ಇಲ್ಲಿಗೆ ಬರುವಂತಹ ಸಹಸ್ರಾರು ಭಕ್ತರೇ ಜೀವಂತ ಸಾಕ್ಷಿ ಮಂಗಳೂರು ವಿಮಾನ ನಿಲ್ದಾಣದಿಂದ ಸರಿಸುಮಾರಾಗಿ ಐದು ಕಿಲೋಮೀಟರ್ ದೂರವಿರುವ ಈ ದೇವಸ್ಥಾನ
ಅನೇಕ ವಿಸ್ಮಯಗಳಿಂದ ಕೂಡಿದೆ. ನಾವು ದೇವಸ್ಥಾನ ಒಳಗೆ ಪ್ರವೇಶಿಸಿದ ಕೂಡಲೇ ನಮಗೆ ಸಿಗುವುದು ಮತ್ಸ್ಯತೀರ್ಥವೆಂಬ ಒಂದು ಸುಂದರ ಕೊಳ ಅನೇಕ ಮತ್ಸ್ಯಗಳು ಈ ಕೊಳದಲ್ಲಿ ಪ್ರಶಾಂತವಾಗಿ ಇರುವುದರಿಂದ ಇದನ್ನು ಮತ್ಸ್ಯ ತೀರ್ಥ ಎಂದು ಹೇಳಿರಬಹುದು ಮತ್ಸ ತೀರ್ಥದಲ್ಲಿ ವರ್ಷವಿಡಿ ಎಲ್ಲಾ ಕಾಲಗಳಲ್ಲೂ ಸಮನಾಗಿ ನೀರು ಇರುತ್ತದೆ. ಈ ಕೊಳ ಎಂದಿಗೂ ಬತ್ತಿದ ಇತಿಹಾಸವಿಲ್ಲ ಈ ದೇವಸ್ಥಾನದ ಸುತ್ತಲೂ ಪ್ರಕೃತಿಯು ಬೆಟ್ಟಗುಡ್ಡಗಳಿಂದ ಕೂಡಿದೆ. ದೇವಸ್ಥಾನದ ಮೇಲಿರುವ ಗುಡ್ಡವನ್ನು ರಿಷಿ ವನ ಎಂದು ಕರೆಯಲಾಗುತ್ತದೆ ದೇವಸ್ಥಾನದ ಒಂದು ದಿಕ್ಕಿನಲ್ಲಿ ರುದ್ರಾಕ್ಷಿ ಮರವಿದೆ ರುದ್ರಾಕ್ಷಿಯನ್ನು ಶಿವನಿಗೆ ಅತ್ಯಂತ ಪವಿತ್ರವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಕಣ್ವ ಋಷಿಗಳು ತಪಸ್ಸು ಮಾಡಿದಂತಹ ಜಾಗ ಈ ಕ್ಷೇತ್ರ ಇದು ಇಲ್ಲಿಯ ಆದಿನಾಥೇಶ್ವರ ದೇವರ ಲಿಂಗವು ಉದ್ಭವ ಲಿಂಗ ಎಂದು ಹೇಳಲಾಗಿದೆ ದೇವಸ್ಥಾನದ ಒಂದು ಸಣ್ಣ ಮೂಲೆಯಲ್ಲಿ ಒಂದು ಚಿಕ್ಕ ಕೊಳವಿದೆ. ಎರಡು ಬಂಡೆಗಳು ಒಡೆದು ಅದರ ಮಧ್ಯದಲ್ಲಿ ಬರುವಂತಹ ನೀರು ತುಂಬಾ ಶುದ್ಧವಾಗಿದೆ. ಈ ಚಿಕ್ಕ ಕೊಳದ ನೀರನ್ನು ದೇವರ ಎಲ್ಲಾ ಕಾರ್ಯಗಳಿಗೂ ಉಪಯೋಗಿಸಲಾಗುತ್ತದೆ.
ಪ್ರದೀಪ್ ,ಚಿನ್ಮಯಿ ಆಸ್ಪತ್ರೆ, ಕುಂದಾಪುರ