ಕುಂದಾಪುರ : ನಗರದ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಪ್ರಾರಂಭೋತ್ಸವವು ಬುಧವಾರ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ್ ಬೆಟ್ಟಿನ್ ರವರ ನೇತ್ರತ್ವದಲ್ಲಿ ಜರುಗಿತು
ಕೆಲವು ಸಮಯದ ಹಿಂದೆ ಈ ಶಾಲೆಯನ್ನು ಮುಚ್ಚಲು ಸರಕಾರಿ ಆದೇಶವಾಗಿದ್ದು ಅದರ ವಿರುಧ್ದ ಹಳೆ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿ ಹೋರಾಟವನ್ನು ಮಾಡಿ ಶಾಲೆಯನ್ನು ಉಳಿಸಿಕೊಂಡು ಈ ವರ್ಷದಿಂದ ನೂತನವಾದ ಕಂಪ್ಯೂಟರ್ ತರಗತಿ ಯೋಗ ತರಗತಿ ಹಾಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೈಗೊಂಡು ಶಾಲೆಯನ್ನು ಉನ್ನತೀಕರಿಸಲಾಗಿದೆ ಎಂದು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ್ ಬೆಟ್ಟಿನ್ ರವರು ನುಡಿದರು
ಕಳೆದ ವರ್ಷಕ್ಕಿಂತ ಈ ಭಾರಿಯ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಪ್ರವೇಶಾತಿ ನಡೆದಿದ್ದು ಎಲ್ಲಾ ಮಕ್ಕಳಿಗೂ ಉಚಿತವಾಗಿ ಪಠ್ಯ ಪುಸ್ತಕ ನೋಟ್ ಪುಸ್ತಕ ಶಾಲಾ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಲಾಯಿತು
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನವೀನ್ ಶೆಟ್ಟಿ ಕುಂದಾಪುರದ ರೋಟರಿ ಸನ್ ರೈಸ್ ನ ಅಧ್ಯಕ್ಷರಾದ ಬಿ ಎಂ ಚಂದ್ರಶೇಖರ್ ಮುಖ್ಯೋಪಧ್ಯಾಯಿನಿ ಶ್ರೀಮತಿ ಉಷಾ ಶೆಟ್ಟಿಗಾರ್ ಪುರಸಭಾ ಸದಸ್ಯ ಕಡ್ಗಿ ದಿವಾಕರ ಪೂಜಾರಿ ಶಾಲಾ ಅಭಿವೃಧ್ದಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಾಲತಿ ಎಂ ಮೇಸ್ತ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು
ಆನಗಳ್ಳಿಯ ದತ್ತಾಶ್ರಮದ ಸುಭಾಸ್ ಪೂಜಾರಿ ಸಂಗಮ್ ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿ ಕೆ ಜಿ ನಿತ್ಯಾನಂದ ಹಾಗೂ ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಜಾಕೋಬ್ ಡಿಸೋಜಾ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು