ಕುಂದಾಪುರ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆ ಇಲ್ಲಿನ ಶಿಕ್ಷಕರಿಗೆ ತರಭೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸ್ಕಿಲ್ ಡೆವಲಪ್ಮೆಂಟ್ ತರಭೇತುದಾರ ಡಾ. ಶಿಜು ತೋಮಸ್ ತೊಟ್ಟಪಿಲ್ಲಿ ಇವರು ಶಿಕ್ಷಕರಿಗೆ ತರಭೇತಿಯನ್ನು ನೀಡಿದರು. ತರಗತಿಯಲ್ಲಿ ವಿವಿಧ ಕೌಟುಂಬಿಕ ಹಿನ್ನಲೆಯುಳ್ಳ ಮಕ್ಕಳು, ವಿವಿಧ ಬುದ್ಧಿಮತ್ತೆ ಮಟ್ಟದ ಮಕ್ಕಳು, ವಿವಿಧ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿದ್ದು ಪ್ರತೀ ಮಗುವಿನ ಮನಃ ಸ್ಥಿತಿಯನ್ನು ಅರಿತು ಅವರೊಂದಿಗೆ ಬೆರೆತು ಶಿಕ್ಷಕರು ಮಕ್ಕಳ ಕಲಿಕೆಗೆ ಸಹಕಾರವಾಗಬೇಕು ಎಂದು ತಿಳಿಸಿದರು ವಿವಿಧ ಘಟನಾವಳಿಗಳನ್ನಾಧರಿಸಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧ್ಯವ್ಯದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ, ಪ್ರಾಂಶುಪಾಲರಾದ ನಿತಿನ್ ಡಿ’ ಆಲ್ಮೇಡಾ, ಶಿಕ್ಷಕ ವೃಂದದವರು ಹಾಗೂ ಆಕ್ಸ್ಫರ್ಡ್ ಎಕ್ಸಿ ಕ್ಯೂಟಿವ್ ಸುಜಿತ್ ಕುಮಾರ್ರವರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರಜ್ಞಾ ಕಾಮತ್ ನಿರೂಪಿಸಿದರು, ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ಸ್ವಾಗತಿಸಿ ಪರಿಚಯಿಸಿದರು. ಕೃಪಾಶ್ರೀ ಶೆಟ್ಟಿ ವಂದಿಸಿದರು.