Home » ನಿತಿನ್ ಸಾಲಿಯಾನ್ ರವರನ್ನು ಬಂಧಿಸಲು ಆಗ್ರಹ
 

ನಿತಿನ್ ಸಾಲಿಯಾನ್ ರವರನ್ನು ಬಂಧಿಸಲು ಆಗ್ರಹ

by Kundapur Xpress
Spread the love

ಕಾಪು : ಇತ್ತೀಚೆಗೆ ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಇವರ ಮೇಲೆ ಅಪರಿಚಿತರಾದ ಮೂರು ಜನ ಬಂದು ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ಖಂಡನೀಯವಾದುದು. ಈ ಕುರಿತಂತೆ ಕಾಪು ಪೋಲಿಸ್ ಠಾಣೆಯುಲ್ಲಿ ದೂರು ದಾಖಲಾಗಿದ್ದು ಈ ಕುರಿತಂತೆ ಪೋಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿ ಈ ಹಿಂದೆ ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳ ಮೇಲೆ ದೂರು ದಾಖಲಾದ ಜಾಮೀನಿನ ಮೇಲೆ ತಿರುಗಾಡುತ್ತಿರುವ ವಾದಿರಾಜ, ಅಭಿಶೇಕ್, ಮತ್ತು ರಂಜಿತ್ ಎಂಬವರು ಈ‌ ಕ್ರತ್ಯ ಎಸಗಿರುವುದು ಕಂಡು ಬಂದಿದ್ದು ಬಂಧಿತರು ಈ ಕ್ರತ್ಯಕ್ಲೆ ಸ್ಥಳೀಯ ಕಾಂಗ್ರೆಸ್ ಮುಖಂಡ ನಿತಿನ ಜೆ ಸಾಲಿಯಾನ್ ಎಂಬವರು ತಮಗೆ ಈ ಕ್ರತ್ಯ ಎಸಗಲು ಸುಪಾರಿ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದು ಮೂರ್ನಾಲ್ಕು ದಿನಗಳಾದರೂ ನಿತಿನ್ ಸಾಲ್ಯನ್ ರವರನ್ನು ಇನ್ನೂ ಬಂಧಿಸಲಾಗಿಲ್ಲ.ಇದೀಗ ರಕ್ಷಿತ್ ಕೋಟ್ಯನ್ ರವರಿಗೆ ಹಾಗೂ ಅವರ ಕುಟುಂಬಕ್ಕೆ ನಿತಿನ್ ಜೆ ಸಾಲಿಯಾನ್ ಇವರಿಂದ ಜೋವ ಬೆದರಿಕೆ ಇದ್ದು ನಟೋರಿಯಸ್ ಕ್ರಿಮಿನಲ್ ಗಳಿಗೆ ಸುಪಾರಿ ನೀಡಿದ ನಿತಿನ್ ಜೆ ಸಾಲಿಯನ್ ಇವರನ್ನು ಕೂಡಲೇ ಬಂಧಿಸಬೇಕಾಗಿ ಉಡುಪಿ ಜಿಲ್ಲಾ ಸೂಪರಿಂಡೆಂಟ್ ಆಫ್ ಪೋಲೀಸ್ ಇವರಿಗೆ ಕಾಪು ಮಂಡಲ ಬಿಜೆಪಿ ಹಾಗೂ ಉದ್ಯಾವರ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕರಾದ ಗುಮೆ೯ ಸುರೇಶ್ ಶೆಟ್ಟಿ.ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಜಿಲ್ಲಾ ಬಿಜೆಪಿ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಜಿಲ್ಲಾ ಪ್ರಕೊಷ್ಠಗಳ ಸಂಯೋಜಕರಾದ ವಿಜಯ್ ಕುಮಾರ್, ಉದ್ಯಾವರ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ರವಿ ಕೋಟ್ಯನ್, ಕಾಪು ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಪ್ರಮುಖರಾದ ಸಂತೋಷ್ ಸುವರ್ಣ, ಜಿತೇಂದ್ರ ಶೆಟ್ಟಿ, ಪ್ರಕಾಶ್ ಕುಮಾರ್, ರಮಾನಂದ, ಪ್ರವೀಣ್ ಪೂಜಾರಿ, ಉದ್ಯಾವರ ಪಂಚಾಯತ್ ಅಧ್ಯಕ್ಷರಾದ ರಾಧಾಕ್ರಷ್ಣ ಶ್ರಿಯಾನ್, ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಪ್ರಕಾಶ್ ಟಿ ಕೋಟ್ಯನ್, ರಮೇಶ್ ಕೋಟ್ಯನ್, ದಿನೇಶ್ ಸಾಲಿಯಾನ್, ಉಮೇಶ್ ಕರ್ಕೇರ, ರವಿರಾಜ್ ಕುಂದರ್, ಕಿಶೋರ್ ಸಾಲ್ಯನ್, ಸಚಿನ್ ಬೊಳ್ಜೆ, ಸತೀಶ್ ಉದ್ಯಾವರ, ಶಿವರಾಮ ಶೆಟ್ಟಿ, ಚಂದ್ರಶೇಖರ, ವಿಠಲ ಕೋಟ್ಯನ್ ಮತ್ತಿತರರು ಉಪಸ್ಥಿತರಿದ್ದರು

   

Related Articles

error: Content is protected !!