Home » ಮನಸ್ಸೆಂಬ ಭಾವಜೀವಿ
 

ಮನಸ್ಸೆಂಬ ಭಾವಜೀವಿ

by Kundapur Xpress
Spread the love

ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: ‘ಕಾಮದ ವಾಸಸ್ಥಾನ ಯಾವುದೆಂದು ತಿಳಿದಿರುವೆ? ಕಾಮವು ನಿಶ್ಚಿತವಾಗಿಯೂ ವಾಸವಾಗಿರುವುದು ಪಂಚೇಂದ್ರಿಯಗಳಲ್ಲಿ, ಮನಸ್ಸು ಮತ್ತು ಬುದ್ಧಿಯಲ್ಲಿ! ಈ ಕಾಮವು ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಜ್ಞಾನವನ್ನು ಆವರಿಸಿಕೊಂಡು ಜೀವಾತ್ಮನನ್ನು ಮೋಹಗೊಳಿಸುತ್ತದೆ. ಆದುದರಿಂದಲೇ ಅರ್ಜುನ, ನೀನು ಮೊದಲು ಇಂದ್ರಿಯಗಳನ್ನು ವಶಮಾಡಿಕೊಂಡು ಜ್ಞಾನ ಮತ್ತು ವಿಜ್ಞಾನಗಳನ್ನು ನಾಶಮಾಡುವ ಈ ಕಾಮರೂಪೀ ಪಾಪಿಯನ್ನು ಖಂಡಿತವಾಗಿಯೂ ಸಂಹಾರ ಮಾಡು. ಅದರಲ್ಲೇ ನಿನಗೆ ಏಳಿಗೆ ಇದೆ.’ ಬಹಿರ್ಮುಖಿಯಾಗಿರುವ ನಮ್ಮ ಪಂಚೇಂದ್ರಿಯಗಳು ನಿರಂತರವಾಗಿ ಪ್ರಕೃತಿಯು ಒಡ್ಡುವ ಪ್ರಲೋಭನೆಗೆ ಬಲಿಯಾಗುತ್ತಿರುತ್ತವೆ. ತಿಂದಷ್ಟು ತಿನ್ನಬೇಕು, ನೋಡಿದಷ್ಟು ನೋಡಬೇಕು; ಕೇಳಿದಷ್ಟು ಕೇಳಬೇಕು, ಸುಖಭೋಗಗಳನ್ನು ಅನುಭವಿಸಿದಷ್ಟು ಮತ್ತೂ ಅನುಭವಿಸಬೇಕೆಂಬ ಆಸೆ ಮನದಾಳದಲ್ಲಿ ಮೂಡುತ್ತಲೇ ಇರುತ್ತದೆ. ನಮ್ಮ ಮನಸ್ಸೇ ನಮ್ಮೆಲ್ಲ ಆಸೆ-ಆಕಾಂಕ್ಷೆಗಳ ಉಗ್ರಾಣವಾಗಿದೆ. ದೇಹದ ಬಯಕೆಗಳೆಲ್ಲವೂ ಮನಸ್ಸೆಂಬ ದರ್ಪಣದಲ್ಲಿ ಪ್ರತಿಬಿಂಬಿತವಾಗುತ್ತವೆ. ಹಾಗೆ ಮನಸ್ಸೆಂಬ ದರ್ಪಣದಲ್ಲಿ ಕಾಮನೆಗಳ ಪ್ರತಿಬಿಂಬ ಮೂಡಿದೊಡೆನೆಯೇ ಬುದ್ಧಿ ಅದನ್ನು ಗ್ರಹಿಸಲು ತೊಡಗುತ್ತದೆ. ಮಾತ್ರವಲ್ಲ ಆ ಕಾಮನೆಗಳನ್ನು ಕಾರ್ಯಗತ ಮಾಡುವ ಹುನ್ನಾರಗಳನ್ನು ರೂಪಿಸಲು ತೊಡಗುತ್ತದೆ. ಮನಸ್ಸು ಭಾವಜೀವಿಯಾದರೆ ಬುದ್ಧಿಗೆ ತರ್ಕಶಕ್ತಿ ಇದೆ. ಒಳಿತು-ಕೆಡುಕುಗಳನ್ನು ವಿಮರ್ಶಿಸುವ ಶಕ್ತಿಯೂ ಅದಕ್ಕಿದೆ. ಆದರೆ ಮನಸ್ಸೆಂಬ ಭಾವಜೀವಿ ತಾನು ಮಾಯಾ ಶಕ್ತಿಗೆ ಬಲಿಯಾಗುವುದಷ್ಟೇ ಅಲ್ಲ; ಬುದ್ಧಿಯನ್ನೂ ಅದರ ಬಲೆಯೊಳಗೆ ಕೆಡಹುವಷ್ಟು ಸಮರ್ಥವಾಗಿದೆ.

   

Related Articles

error: Content is protected !!