Home » ಶಾಸಕರ ಜೀಪು ಅಪಘಾತ
 

ಶಾಸಕರ ಜೀಪು ಅಪಘಾತ

by Kundapur Xpress
Spread the love

ಶಾಸಕರ ಜೀಪು ಅಪಘಾತ

ಉಡುಪಿ: ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರುಳುತ್ತಿದ್ದ ತೆಲಂಗಾಣ ರಾಜ್ಯದ ತಂಡೂರು ಜಿಲ್ಲೆಯ ಶಾಸಕರಾದ ರೋಹಿತ್ ರೆಡ್ಡಿ ಎಂಬುವರು ಪ್ರಯಾಣಿಸುತ್ತಿದ್ದ ಕಾರಿನ ಟೈಯರ್ ಸ್ಪೋಟಗೊಂಡು ಅಪಘಾತಕ್ಕೋಳಗಾದ ಘಟನೆ ಕಾರ್ಕಳ ಸಮೀಪದಲ್ಲಿ ನಡೆದಿದೆ

ಕಾರ್ಕಳದ ಮಿಯಾರು ಸೇತುವೆ ಬಳಿಯ ಮುಡಾರು-ನಲ್ಲೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ ಶೃಂಗೇರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಜೀಪಿನ ಟೈಯರ್ ಏಕಾಏಕಿ ಸ್ಪೋಟಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಯಾವುದೇ ದುರಂತ ಸಂಭವಿಸಲಿಲ್ಲ ವಾಹನದಲ್ಲಿ ಇದ್ದ ಶಾಸಕರಿಗೆ ಯಾವುದೇ ತರದ ಗಾಯಗಳಾಗಿಲ್ಲ  ಅಪಘಾತಗೊಂಡ ಜೀಪು ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರದ ಮಧ್ಯೆ ಸಿಲುಕಿಕೊಂಡು ಜಖಂಗೊಂಡಿದೆ ನಂತರ ಕಾರ್ಕಳ ಪೊಲೀಸರ ಸಹಕಾರದಿಂದ ಶಾಸಕರು  ಪ್ರತ್ಯೇಕ ವಾಹದಲ್ಲಿ ಶೃಂಗೇರಿ ಕಡೆಗೆ ತೆರಳಿದ್ದಾರೆ

 

Related Articles

error: Content is protected !!