“ಮಾತೃ ಭಾಷೆಯ ಉಚ್ಚರಣೆ ಮತ್ತು ಸಂವಹನ ನಮಗೆ ಎಷು ಸುಲಭ ಹಾಗೂ ಸರಾಗವೋ ಇನ್ನೊಂದು ಭಾಷೆಯನ್ನು ಕಲಿತು ಆಡುವಾಗ ಅಷ್ಟೇನೂ ಸುಲಭವಾಗಲಾರದು. ಇಂಗ್ಲೀಷ್ ಇಂದಿನ ದಿನಗಳಲ್ಲಿ ಜಾಗತಿಕ ಭಾಷೆಯಾಗಿ ಸಂವಹನ ಮಾದ್ಯಮವಾಗಿ ಬೆಳೆದಿರುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಉದ್ಯೋಗ ವ್ಯವಹಾರಕ್ಕಾಗಿ ನಾವು ಇಂಗ್ಲೀಷ್‍ನ್ನು ಕಲಿತು ಆಡುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ” ಎಂದು ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತುದಾರರು ಆದ ಶ್ರೀ ಅಶೋಕ ತೆಕ್ಕಟ್ಟೆ ಇವರು ಅಭಿಪ್ರಾಯಪಟ್ಟರು. ಅವರು ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಸ್ಪೋಕನ್ ಇಂಗ್ಲೀಷ್ ಸ್ಕಿಲ್ಸ್ : ಉಚ್ಚರಣೆಯಲ್ಲಿ ಆಗುವ ಸಾಮಾನ್ಯ ತಪ್ಪುಗಳು’ ಎನ್ನುವ ವಿಷಯದ ಮೇಲಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು ಹಾಗೂ ಇಂಗ್ಲೀಷ್ ಭಾಷೆಯ ಉಚ್ಚರಣೆ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಇವರು ತಾನು ವೃತ್ತಿಯಲ್ಲಿ ಆಂಗ್ಲಭಾಷಾ ಉಪನ್ಯಾಸಕನಾಗಿ ಕಾರವಾರದಂತ ಜಿಲ್ಲಾ ಕೇಂದ್ರ ಸ್ಥಳದಲ್ಲಿ ತೀರಾ ಹಳ್ಳಿಯ ಬದುಕಿನಿಂದ ಕನ್ನಡ ಮಾಧ್ಯಮದಿಂದ ಬಂದು ಸರಾಗವಾಗಿ ಇಂಗ್ಲೀಷ್‍ನ್ನು ಮಾತನಾಡುವ ವಿದ್ಯಾರ್ಥಿಗಳ ಎದುರು ನಿಂತು ಇಂಗ್ಲೀಷ್ ಬೋಧನೆ ಮಾಡುವಾಗ ಆದ ಅನುಭವದ ಪಾಠವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಆತ್ಮ ವಿಶ್ವಾಸದಿಂದ, ಕೀಳರಿಮೆ ಬಿಟ್ಟು ಆಂಗ್ಲಭಾಷೆಯನ್ನು ಕಲಿಯಬೇಕು ಎನ್ನುವುದಾಗಿ ತಿಳಿಸಿದರು. ಕಾಲೇಜು ಐಕ್ಯೂಎಸಿ ಸಂಚಾಲಕ ಶ್ರೀ ನಾಗರಾಜ ಯು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯ ಬಳಕೆ, ಉಚ್ಚರಣೆಯಲ್ಲಿ ವಹಿಸಬೇಕಾದ ಎಚ್ಚರದ ಬಗ್ಗೆ ಗಮನ ಸೆಳೆದರು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಕನ್ನಡ ಸಹ ಪ್ರಾಧ್ಯಾಫಕರಾದ ಶ್ರೀ ನಾಗರಾಜ ವೈದ್ಯ ಎಂ., ಆಂಗ್ಲಭಾಷಾ ವಿಭಾಗ ಉಪನ್ಯಾಸಕಿ ಶ್ರೀಮತಿ ಸೇವಂತಿ ಪಿ. ಮೇಸ್ತ, ಉಪಸ್ಥಿತರಿದ್ದರು. ಉಪನ್ಯಾಸಕರಾದ, ಶ್ರೀ ಶ್ರೀಮತಿ ಜಯಂತಿ ಬಾೈ ಆಂಗ್ಲಭಾಷಾ ಉಪನ್ಯಾಸಕಿ ಇವರು ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು. ಶ್ರೀ ವಿನಯಚಂದ್ರ ಇವರು ಸಹಕರಿಸಿದರು. ಕು. ಸೌಮ್ಯಶ್ರೀ ಮತ್ತು ತಂಡ ಪ್ರಾರ್ಥಿಸಿದರು. ಕುಮಾರಿ ಧನುಜಾ ವಂದಿಸಿದರು. ಕು. ಆಲಿಯಾ ಕೌಸರ್ ನಿರೂಪಿಸಿದರು.