Home » ಶರಣಾಗದಿದ್ದರೆ ಆಸ್ತಿ ಜಪ್ತಿಗೆ ನಿರ್ಧಾರ
 

ಶರಣಾಗದಿದ್ದರೆ ಆಸ್ತಿ ಜಪ್ತಿಗೆ ನಿರ್ಧಾರ

by Kundapur Xpress
Spread the love

 ಮಂಗಳೂರು :ಕಳೆದ ವರ್ಷ ಜುಲೈಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ 21 ಆರೋಪಿಗಳ ಪೈಕಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ

ಸತತವಾಗಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಈ ತಿಂಗಳ 30 ರ ಒಳಗೆ ಶರಣಾಗುವಂತೆ ಅಂತಿಮ ಎಚ್ಚರಿಕೆ ನೀಡಿದೆ

ಈ ಕುರಿತಂತೆ ಬುಧವಾರ ಧ್ವನಿವರ್ಧಕದ ಮೂಲಕ ಆರೋಪಿಗಳ ಮನೆಯ ಪ್ರದೇಶದಲ್ಲಿ ಎಚ್ಚರಿಕೆ ಮೂಡಿಸುವ ಕಾರ್ಯ ನಡೆದಿದ್ದು ಆರೋಪಿಗಳ ಮನೆಗೆ ನೋಟಿಸು ಅಂಟಿಸಲಾಗಿದೆ ಇದರಲ್ಲಿ ಆರೋಪಿಗಳು ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ ಪ್ರಕರಣದ ಒಟ್ಟು 21 ಆರೋಪಿಗಳ ಪೈಕಿ ಈಗಾಗಲೇ 16 ಮಂದಿಯನ್ನು ಎನ್‌ ಐ ಏ ಬಂಧಿಸಿದ್ದು ಐವರು ಆರೋಪಿಗಳು ಮಾತ್ರ ಬಂಧನಕ್ಕೆ ಬಾಕಿ ಇದ್ದಾರೆ

 ಕಳೆದ ವರ್ಷ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪಿ ಎಫ್ ಐ ತಂಡ ಪ್ರವೀಣ್‌ ನೆಟ್ಟಾರು ರವರನ್ನು ಹತ್ಯೆ ಮಾಡಿತ್ತು

   

Related Articles

error: Content is protected !!