- ಬದುಕಿನ ಇತಿಮಿತಿ
ಇಂದ್ರಿಯಗಳು ಕೊಡುವ ಸುಖವೇ ಪರಮ ಸುಖವೆಂಬ ನಂಬಿಕೆಯನ್ನು ಹೊಂದಿರುವುದರಿಂದಲೇ ನಾವು ಅವುಗಳ ಬೆನ್ನಿಗೆ ಬಿದ್ದಿರುವುದು ನಿಜವಷ್ಟೇ? ಆದುದರಿಂದಲೇ ನಮಗೆ ಲೌಕಿಕ ಬದುಕಿನಲ್ಲಿ ಮನಸ್ಸಿನ ಸುಖ-ಸಂತೋಷಕ್ಕಿಂತಲೂ ದೇಹಸುಖವೇ ಮುಖ್ಯವಾಗುತ್ತದೆ. ಹಾಗಾಗಿ ಅದಕ್ಕೆ ಅವಶ್ಯವೆನಿಸುವ ಪರಿಕರಗಳನ್ನು ಸಂಗ್ರಹಿಸುವುದರಲ್ಲೇ ನಾವು ತಲ್ಲೀನರಾಗುತ್ತೇವೆ. ಆದರೆ ಅಂತಹ ಪರಿಕರಗಳನ್ನು ಸಂಗ್ರಹಿಸುವುದರಲ್ಲೇ ನಾವು ತಲ್ಲೀನರಾಗುತ್ತೇವೆ. ಆದರೆ ಅಂತಹ ಪರಿಕರಗಳು ದೇಹ ಸುಖವನ್ನು ಹೆಚ್ಚಿಸುವ ಬದಲು ದೇಹವನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಮಾತ್ರವಲ್ಲ ಅದರ ಪರಿಣಾಮವಾಗಿ ಇನ್ನೂ ದುಬಾರಿಯ, ಅತ್ಯಾಧುನಿಕವೆನಿಸುವ ಪರಿಕರಗಳನ್ನು ಕೊಳ್ಳಲು ಮುಂದಾಗುತ್ತೇವೆ. ವಿಚಿತ್ರವೆಂದರೆ ಯಾವ ಪರಿಕರಗಳನ್ನು ಕೊಳ್ಳಲು ಮುಂದಾಗುತ್ತೇವೆ. ವಿಚಿತ್ರವೆಂದರೆ ಯಾವ ಪರಿಕರಗಳಿಂದ ಸುಖ-ಸಂತೋಷ ಸಿಗುವುದೆಂಬ ಭ್ರಾಂತಿಯನ್ನು ಬೆಳೆಸಿಕೊಂಡೆವೋ ಅವೇ ಪರಿಕರಗಳು ಅವೇ ಪರಿಕರಗಳು ನಮ್ಮ ದುಃಖವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ದೈಹಿಕ ಸುಖದ ಬೆನ್ನು ಹತ್ತಿರುವ ನಮಗೆ ಆ ಸುಖವೇ ದುಃಖದ ಮೂಲವೆಂಬ ಸತ್ಯದ ಅರಿವು ನಿಧಾನವಾಗಿ ಉಂಟಾಗುತ್ತದೆ. ಇದು ನಿಜವಾದ ಅರ್ಥದಲ್ಲಿ ಲೌಕಿಕ ಬದುಕಿನ ಸುಖ-ಸಂತೋಷಗಳ ಬಗ್ಗೆ ನಮಗಿರುವ ಭ್ರಾಂತಿಯನ್ನು ಕಳಚುವ ಪ್ರಕ್ರಿಯೆಯೇ ಆಗಿದೆ. ಆ ಭ್ರಾಂತಿಯನ್ನು ನಾವು ಕಳಚಿಕೊಳ್ಳದಿದ್ದರೆ ಬದುಕು ಮತ್ತಷ್ಟು ದುಃಖಮಯವಾಗುವುದರಲ್ಲಿ ಸಂದೇಹವಿಲ್ಲ. ಬದುಕು ಸಾಗುವ ಪ್ರಕ್ರಿಯೆಯಲ್ಲಿ ನಿಜಕ್ಕೂ ನಾವು ಅರಿತುಕೊಳ್ಳುವುದು ಐಹಿಕ ಜೀವನದ ಇತಿ-ಮಿತಿಗಳನ್ನು ತಿಳಿಯಲು ಸಾಧ್ಯವಾದರೆ ಅವುಗಳಿಂದ ಉಂಟಾಗಿರುವ ಭ್ರಾಂತಿಯಿಂದ ಹೊರಬರಲು ಸಾಧ್ಯವಾದೀತು. ಆಗ ಮಾತ್ರವೇ ನಿಜವಾದ ಅರ್ಥದಲ್ಲಿ ವೈರಾಗ್ಯ ಮೂಡಿದಂತಾಗುವುದು.