ಮಂಗಳೂರು : ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡಿದರೆ ವೈದ್ಯರು ದೇಶದ ಜನರ ಪ್ರಾಣ ರಕ್ಷಣೆಯನ್ನು ಮಾಡುತ್ತಾರೆ. ವೈದ್ಯರು ತ್ಯಾಗದ ಸಂಕೇತ ಎಂದರೂ ಅತಿಶಯೋಕ್ತಿಯಲ್ಲ ತಮ್ಮ ಕಷ್ಟ ಸುಖಗಳನ್ನು ಬದಿಗೊತ್ತಿ ರೋಗಿಗಳ ಚಿಕಿತ್ಸೆಗಾಗಿ ಸದಾ ತೊಡಗಿ ರೋಗಿಗಳನ್ನು ಗುಣಮುಖರನ್ನಾಗಿಸುವ ವೈದ್ಯರನ್ನು ಸಮಾಜ ಸಹಾನುಭೂತಿಯಿಂದ ನೋಡಬೇಕಾದ ಸಂದರ್ಭವೇ ವೈದ್ಯ ದಿನಾಚರಣೆ
ಸಮಾಜ ಸುರಕ್ಷಿತವಾಗಿ ಇರಬೇಕಾದರೆ ಎಲ್ಲರೂ ಆರೋಗ್ಯವಂತರಾಗಿರಬೇಕು ಈ ನಿಟ್ಟಿನಲ್ಲಿ ಮಾದಕ ವಸ್ತು ಧೂಮಪಾನ ಹಾಗೂ ಮಧ್ಯಪಾನ ಸೇವನೆಯಿಂದ ಜನರನ್ನು ಮುಕ್ತಗೊಳಿಸುವುದು ನಮ್ಮ ನಿಮ್ಮಲ್ಲರ ಆದ್ಯ ಕರ್ತವ್ಯ ತನ್ನ ಎಲ್ಲಾ ಸಹದ್ಯೋಗಿಗಳಿಗೆ ವೈದ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು